ADVERTISEMENT

ಪುತ್ತೂರು | ಕಸದಿಂದ ಸಿಎನ್‌ಜಿ ಉತ್ಪಾದನೆ ಶೀಘ್ರ ಆರಂಭ: ಶಾಸಕ ಅಶೋಕ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 7:26 IST
Last Updated 7 ಆಗಸ್ಟ್ 2024, 7:26 IST
ಸ್ವಚ್ಛ ಭಾರತ್ ಯೋಜನೆಯಡಿ ಖರೀದಿಸಲಾದ ವಾಹನಗಳನ್ನು ಶಾಸಕ ಅಶೋಕ್‌ ಕುಮಾರ್ ರೈ, ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಹಸ್ತಾಂತರಿಸಿದರು
ಸ್ವಚ್ಛ ಭಾರತ್ ಯೋಜನೆಯಡಿ ಖರೀದಿಸಲಾದ ವಾಹನಗಳನ್ನು ಶಾಸಕ ಅಶೋಕ್‌ ಕುಮಾರ್ ರೈ, ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಹಸ್ತಾಂತರಿಸಿದರು   

ಪುತ್ತೂರು: ಕಸದಿಂದ ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಉತ್ಪಾದಿಸುವ ಘಟಕವು ರಾಜ್ಯದಲ್ಲೇ ಮೊದಲ ಬಾರಿಗೆ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ’ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

ಸ್ವಚ್ ಭಾರತ್ ಯೋಜನೆಯಡಿ ಕಸ ಸಂಗ್ರಹಣೆಗಾಗಿ ಖರೀದಿಸಲಾದ ಎರಡು ಸಿಎನ್‌ಜಿ ವಾಹನಗಳನ್ನು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಸದ್ಯ ಕಸದಿಂದ ಸಿಎನ್‌ಜಿ ಉತ್ಪಾದನೆಯು ಪರೀಕ್ಷಾ ಹಂತದಲ್ಲಿದೆ. ಘಟಕ ಕಾರ್ಯಾರಂಭ ಮಾಡಿದ ನಂತರ ನಗರಸಭೆಯ ಎರಡು ವಾಹನಗಳಿಗೆ ಇದೇ ಅನಿಲ ಬಳಕೆ ಮಾಡಲಾಗುವುದು. ಉಳಿದ ಅನಿಲವನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.

ADVERTISEMENT

ನಗರಸಭೆಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಈಗಾಗಲೇ 18 ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದೀಗ ಎರಡು ನೂತನ ಸಿಎನ್‌ಜಿ ವಾಹನಗಳನ್ನು ಖರೀದಿಸಲಾಗಿದೆ’ ಎಂದರು.

ನಗರಸಭಾ ಸದಸ್ಯ ಬಾಲಚಂದ್ರ ಕರಿಯಾಲ, ಮಹಮ್ಮದ್ ರಿಯಾಝ್ ಪರ್ಲಡ್ಕ, ಶೈಲಾ ಪೈ ಮೊಟ್ಟೆತ್ತಡ್ಕ, ರಾಬಿನ್ ತಾವ್ರೋ ಸಾಲ್ಮರ, ದಿನೇಶ್ ಶೇವಿರೆ, ನಗರಸಭೆ ಅಧಿಕಾರಿ ಶಬರೀನಾಥ್, ರಾಮಚಂದ್ರ, ಶ್ವೇತಾ ಕಿರಣ್, ಜಯಲಕ್ಷ್ಮಿ ಬೇಕಲ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.