ಮಂಗಳೂರು: ಕ್ರಿಪ್ಟೊ ಕರೆನ್ಸಿ ಮಾರಾಟದ ಹೆಸರಿನಲ್ಲಿ ಯುವತಿಯೊಬ್ಬರು ವಂಚನೆಗೆ ಒಳಗಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಇಲ್ಲಿನ ಸೆನ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನನ್ನ ಮಗಳು ಸುಮಾರು ಒಂದು ವರ್ಷದಿಂದ ಬಿನ್ಯಾನ್ಸ್ ಆನ್‌ಲೈನ್ ಆ್ಯಪ್‌ನಲ್ಲಿ ಕ್ರಿಪ್ಟೊ ಕರೆನ್ಸಿ ಹಣ ಹೂಡಿಕೆ ಮಾಡುತ್ತಿದ್ದಾಳೆ. ಯುನೈಟೆಡ್ ಸ್ಟೇಟ್ಸ್ ಖಜಾನೆ ಇಲಾಖೆಯಲ್ಲಿ (ಯುಎಸ್‌ಡಿಟಿ) ಈ ವರ್ಷದ ಜುಲೈ 19ರಿಂದ ಹಣ ಹೂಡಿಕೆ ಮಾಡಿದ್ದ ಆಕೆ, ಕ್ರಿಪ್ಟೊ ಕರೆನ್ಸಿ ಖರೀದಿಸಲು ಬಯಸಿದ್ದಳು. ಸಫಿಕುಲ್ ಮೋಮಿನ್ ಎಂಬ ವ್ಯಕ್ತಿ ಕ್ರಿಪ್ಟೊ ಕರೆನ್ಸಿ ಮಾರುವುದಾಗಿ ತಿಳಿಸಿದ್ದರು. ಮಾರಾಟಗಾರರು ಸೂಚಿಸಿದ್ದ ಯುಪಿಐ ಖಾತೆಗೆ ಮಗು ₹ 40 ಸಾವಿರವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಳು. ಆದರೆ, ನೀಡಿದ ಹಣವನ್ನು ಮರಳಿಸದೆ, ಕ್ರಿಪ್ಟೊ ಕರೆನ್ಸಿಯನ್ನೂ ನೀಡದೇ ವಂಚನೆ ನಡೆಸಲಾಗಿದೆ’ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.