ADVERTISEMENT

7,900 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಉಮಾನಾಥ ಕೋಟ್ಯಾನ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:58 IST
Last Updated 11 ಮಾರ್ಚ್ 2023, 14:58 IST
ಮೂಡುಬಿದಿರೆ ಸಮೀಪದ ಕುಕ್ಕುದಕಟ್ಟೆ–ಜೋಕೊಟ್ಟು ರಸ್ತೆಯ ಸೇತುವೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಉದ್ಘಾಟಿಸಿದರು. ಪ್ರದೀಪ್ ಕುಮಾರ್, ಸುಖೇಶ್ ಶೆಟ್ಟಿ ಇದ್ದಾರೆ 
ಮೂಡುಬಿದಿರೆ ಸಮೀಪದ ಕುಕ್ಕುದಕಟ್ಟೆ–ಜೋಕೊಟ್ಟು ರಸ್ತೆಯ ಸೇತುವೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಉದ್ಘಾಟಿಸಿದರು. ಪ್ರದೀಪ್ ಕುಮಾರ್, ಸುಖೇಶ್ ಶೆಟ್ಟಿ ಇದ್ದಾರೆ    

ಮೂಡುಬಿದಿರೆ: ‘ನನ್ನ ಕ್ಷೇತ್ರದಲ್ಲಿ ಈವರೆಗೆ 7900 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದಾಗಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮನೆ ಕಟ್ಟಿ ವಾಸವಾಗಿದ್ದ ಶೇ 75 ಮಂದಿಗೆ ಅನುಕೂಲವಾಗಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

₹3.33 ಕೋಟಿ ವೆಚ್ಚದ ಕುಕ್ಕುದಕಟ್ಟೆಯಿಂದ ಜೋಗೊಟ್ಟುವರೆಗಿನ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ‌

‘ಸೂರಿಲ್ಲದೆ ಅದೆಷ್ಟೊ ಬಡವರು ಕಣ್ಣೀರಲ್ಲಿ ಇದ್ದುದನ್ನು ನಾನು ನೋಡಿದ್ದೇನೆ. ಬಡಕುಟುಂಬದ ಹಿನ್ನೆಲೆಯ ನನಗೆ ಬಡವರ ನೋವು ಗೊತ್ತಿದೆ. ಕ್ಷೇತ್ರದಲ್ಲಿ ಗರಿಷ್ಟ ಸಂಖ್ಯೆಯ ಬಡವರಿಗೆ ಹಕ್ಕುಪತ್ರ ಸಿಕ್ಕಿದೆ. ಹಲವು ದಶಕಗಳ ಜೋಗೊಟ್ಟು ಸಂಪರ್ಕ ಸೇತುವೆ ಬೇಡಿಕೆಯನ್ನು ಈಡೇರಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ವಾಲ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ₹25 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಆಗಿವೆ. ಚುನಾವಣೆ ಪೂರ್ವ ಕೊಟ್ಟಿದ್ದ ಭರವಸೆ ಕಾರ್ಯಗತಗೊಳಿಸಿದ್ದೇನೆ’ ಎಂದು ಹೇಳಿದರು.

ವಾಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಬಿಜೆಪಿ ಮುಖಂಡ ಸುಖೇಶ್ ಶೆಟ್ಟಿ, ಶಿರ್ತಾಡಿ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ನಾಗವೇಣಿ, ಸಂತೋಷ್ ಶೆಟ್ಟಿ, ಸಂತೋಷ್ ಅಂಚನ್, ಭವಾನಿ, ಯಶೋದಾ ಇದ್ದರು. ಗಣೇಶ್ ಅಳಿಯೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.