ADVERTISEMENT

ವೇಣೂರು ಬಾಹುಬಲಿಗೆ ಮಸ್ತಕಾಭಿಷೇಕ ಮೇ.4ರಂದು

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:29 IST
Last Updated 2 ಮೇ 2024, 15:29 IST

ಮೂಡುಬಿದಿರೆ (ದಕ್ಷಿಣ ಕನ್ನಡ): ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕದ ಈ ಬಾರಿಯ ಕೊನೆಯ ಅಭಿಷೇಕವು ಮೇ 4ರಂದು ನಡೆಯಲಿದೆ ಎಂದು ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಸಂಜೆ 3ರಿಂದ 7ರವರೆಗೆ ಜಲಾಭಿಷೇಕ ನಡೆಯಲಿದೆ. ರಾತ್ರಿ 8ರಿಂದ 11ರವರೆಗೆ ಪಂಚಾಮೃತ ಅಭಿಷೇಕವು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಲಿದೆ. ಭಗವಾನ್ ವೀರ ನಿರ್ವಾಣ ವರ್ಷ 2550ರ ನೆನಪಿಗೆ ನಡೆಯುವ ಈ ಮಸ್ತಕಾಭಿಷೇಕದಲ್ಲಿ ರಾಜ್ಯ ಹಾಗೂ ವಿದೇಶದ ವಿವಿಧ ಭಾಗಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಹೊರನಾಡು ಜಯಶ್ರೀ ಜೈನ್ ಬಳಗದಿಂದ ಭಕ್ತಿ ಸಂಗೀತ ನಡೆಯಲಿದೆ. ಸುಮಾರು 504 ಕಲಶಗಳನ್ನು ಉಚಿತವಾಗಿ ನೀಡಲಾಗಿದೆ. ಜೈನ ಸಮಾಜದವರು ಅಭಿಷೇಕದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅಪೇಕ್ಷಿತರಿಗೆ ₹1 ಸಾವಿರ ಬೆಲೆಯ ‘ಸ್ವಸ್ತಿಶ್ರೀ’ ಕಲಶಗಳ ಕೂಪನ್ ವೇಣೂರು ಬಾಹುಬಲಿ ಬೆಟ್ಟದ ಕಚೇರಿಯಲ್ಲಿ ಲಭ್ಯ ಇದೆ ಎಂದು ತಿಳಿಸಿದರು.

ADVERTISEMENT

ಪಟ್ಣಶೆಟ್ಟಿ ಸುದೇಶ್ ಕುಮಾರ್, ಬಾಹುಬಲಿ ಪ್ರಸಾದ್ ಹಾಗೂ ಸಂಜಯಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.