ADVERTISEMENT

ಪುತ್ತೂರು | ಆನ್‌ಲೈನ್‌ನಲ್ಲಿ ರೈತನಿಗೆ ₹ 1.35 ಲಕ್ಷ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 14:04 IST
Last Updated 1 ಜೂನ್ 2024, 14:04 IST
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)   

ಪುತ್ತೂರು: ಆನ್‌ಲೈನ್‌ ಮೂಲಕ ಡ್ರಮ್ ಪೂರೈಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಮಹರಾಷ್ಟ್ರದ ಬ್ಯಾರಲ್ ಸಂಸ್ಥೆಯೊಂದರ ಹೆಸರಿನಲ್ಲಿ ಅಪರಿಚಿತರು ವಂಚಿಸಿರುವ ಕುರಿತು ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆಯ ಕೃಷಿ ಉತ್ಪನ್ನಗಳ ಮಾರಾಟಗಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು ತಾಲ್ಲೂಕಿನ ನರಿಮೊಗರು ನಿವಾಸಿ ಗಣೇಶ್ ಪ್ರಭು (40) ವಂಚನೆಗೊಳಗಾದವರು. ‘ಯುನಿಟಿ ಪಾಲಿ ಬ್ಯಾರೆಲ್ಸ್ ಪ್ರೈವೇಟ್ ಲಿಮಿಟೆಡ್ ಅಶೋಕ ನಗರ, ಶಿವಾಜಿ ನಗರ, ಪುಣೆ, ಮಹಾರಾಷ್ಟ್ರ ಎಂಬ ಹೆಸರಿನಲ್ಲಿ ಸಂಪರ್ಕಿಸಿದ ಅಪರಿಚಿತನೊಬ್ಬ ಆನ್‌ಲೈನ್‌ ಮೂಲಕ ಡ್ರಮ್ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ, ಮೇ 8ರಿಂದ ಮೇ 10ರ ಅವಧಿಯಲ್ಲಿ ಮೂರು ಕಂತುಗಳಲ್ಲಿ ಪೋನ್‌ಪೇ ಮೂಲಕ ₹ 1,30,500 ಪಡೆದುಕೊಂಡಿದ್ದ., ಆ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ವಂಚಿಸಿದ್ದಾನೆ’ ಎಂದು ಗಣೇಶ್ ಪ್ರಭು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT