ADVERTISEMENT

ಕೊಂಕಣಿ ಭವನ ವರ್ಷಾಂತ್ಯಕ್ಕೆ ಸಿದ್ಧ: ಜೋಕಿಂ ಸ್ಟ್ಯಾನಿ ಅಲ್ವಾರಿಸ್‌

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಸ್ಟ್ಯಾನಿ ಅಲ್ವಾರಿಸ್‌ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 6:37 IST
Last Updated 19 ಜೂನ್ 2024, 6:37 IST
ಜೋಕಿಂ ಸ್ಟ್ಯಾನಿ ಅಲ್ವಾರಿಸ್‌
ಜೋಕಿಂ ಸ್ಟ್ಯಾನಿ ಅಲ್ವಾರಿಸ್‌   

ಮಂಗಳೂರು: ‘ಕೊಂಕಣಿ ಭವನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಅದನ್ನು ಲೋಕಾರ್ಪಣೆ ಮಾಡುವುದು ನನ್ನ ಆದ್ಯತೆ. ಕೊಂಕಣಿ ಸಾಹಿತ್ಯ ರಚನೆಗೆ, ಸಾಂಸ್ಕೃತಿಕ ಸಂಶೋಧನೆಗೆ ಪ್ರಾಶಸ್ತ್ಯ ನೀಡಲಿದ್ದೇವೆ’ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್‌ ಹೇಳಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷರಾಗಿ ಮಂಗಳ ವಾರ ಅಧಿಕಾರ ಸ್ವೀಕರಿಸಿ, ಅವರು ಮಾತನಾಡಿದರು.

‘ಕೊಂಕಣಿ ಭವನದ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹ 3 ಕೋಟಿ ಅನುದಾನದ ಅಗತ್ಯವಿದೆ. ವಿದ್ಯುತ್‌ ಕಾಮಗಾರಿ, ಲಿಫ್ಟ್‌, ವಾಹನ ನಿಲುಗಡೆ, ಒಳಾಂಗಣ ವಿನ್ಯಾಸ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ’ ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ,ದಕ್ಷಿಣ ಕನ್ನಡ‌ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್‌, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಶಾಂತ್ ಮಾಡ್ತ, ರೊನಾಲ್ಡ್ ಕ್ರಾಸ್ತ, ನವೀನ್ ಲೋಬೊ, ಸಮರ್ಥ್ ಭಟ್, ಯಲ್ಲಾಪುರದ ಸುನಿಲ್‌ ಸಿದ್ಧಿ, ಜೇಮ್ಸ್ ಲೋಕೇಸ್, ಕಾರ್ಕಳದ
ದಯಾನಂದ್‌ ಮಡ್ಕೇಕರ್ ಕಾರ್ಕಳ, ಚಿಕ್ಕಮಗಳೂರಿನ ಪ್ರಮೋದ್ ಪಿಂಟೊ ಭಾಗವಹಿಸಿದ್ದರು.

ಮಾಂಡ್ ಸೋಭಾಣ್‌ನ ವಿಟೊರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.