ADVERTISEMENT

ಕಟೀಲು ಬಳಿ ಅಣೆಕಟ್ಟು ಕುಸಿತ: ಪಾದಾಚಾರಿಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 4 ಮೇ 2024, 14:24 IST
Last Updated 4 ಮೇ 2024, 14:24 IST
ಕಟೀಲು ಬಳಿಯ ಅಣೆಕಟ್ಟು ಕುಸಿದು ಬಿದ್ದಿರುವುದು
ಕಟೀಲು ಬಳಿಯ ಅಣೆಕಟ್ಟು ಕುಸಿದು ಬಿದ್ದಿರುವುದು   

ಮೂಲ್ಕಿ: ಶಿಬರೂರು ಮತ್ತು ಕಟೀಲು ನಡುವಿನ ಸಂಪರ್ಕ ಸೇತುವಾಗಿದ್ದ ಮೂಡುಮಠ ಬಳಿಯ ಅಣೆಕಟ್ಟೆ ಶುಕ್ರವಾರ ತಡರಾತ್ರಿ ಕುಸಿದಿದ್ದು ಗ್ರಾಮಸ್ಥರ ಸಂಪರ್ಕ ಮೂಲ ಕಡಿದಂತಾಗಿದೆ.

18 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಅಣೆಕಟ್ಟೆ ನೀರು ಕಟ್ಟಿನಿಂತು ಈ ಪ್ರದೇಶದ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿತ್ತು. ನಂದಿನಿ ನದಿಯ ಉಪ್ಪು ನೀರಿಗೆ ತಡೆಗೋಡೆಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಶಿಬರೂರಿನಿಂದ ಕಟೀಲಿಗೆ ನಡೆದುಕೊಂಡು ಬರಲು ಹತ್ತಿರದ ದಾರಿಯಾಗಿಯೂ ಬಳಕೆಯಾಗುತ್ತಿತ್ತು.

ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿ ಅಕ್ರಮ ಮರಳುಗಾರಿಕೆಯೇ ಅಣೆಕಟ್ಟು ಕುಸಿಯಲು ಕಾರಣ ಎಂದು ದೂರಿದರು.

ADVERTISEMENT

ಎರಡು ತಿಂಗಳ ಹಿಂದೆ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿ, ಗಣಿ ಹಾಗೂ ಪೊಲೀಸ್ ಇಲಾಖೆಗೆ ವರದಿ ನೀಡಿದ್ದಾರೆ. ಆದರೂ ಮರಳುಗಾರಿಕೆ ನಡೆಯುತ್ತಿದೆ. ಆದ್ದರಿಂದ ಅಣೆಕಟ್ಟೆ ಕುಸಿತಕ್ಕೆ ಪೊಲೀಸ್ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದರು.

ಕೆ.ಭುವನಾಭಿರಾಮ ಉಡುಪ ಕಿನ್ನಿಗೋಳಿ, ಸಿರಿಕುರಲ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ರತ್ನಾಕರ ಶೆಟ್ಡಿ ಎಕ್ಕಾರು, ಪ್ರವೀಣ್‌ ಮಾಡ, ಸುರೇಶ್ ಶೆಟ್ಟಿ ಎಕ್ಕಾರು, ಪಂಚಾಯಿತಿಯ ಮಾಜಿ ಸದಸ್ಯರಾದ ಅರುಣಕುಮಾರ್ ಮಲ್ಲಿಗೆಯಂಗಡಿ, ಜಿತೇಂದ್ರ ಶೆಟ್ಟಿ, ಗ್ರಾಮಸ್ಥ ಪುರುಷೋತ್ತಮ ಕೋಟ್ಯಾನ್ ಇದ್ದರು.

ಕಟೀಲು ಬಳಿಯ ಅಣೆಕಟ್ಟು ಕುಸಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.