ಮಂಗಳೂರು: ಪಾಲಿಕೆಯ ವ್ಯಾಪ್ತಿಯಲ್ಲಿ ಈ ವರ್ಷದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಮೂವರು ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಗಳಿಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ತಲಾ ₹ 1 ಲಕ್ಷ ಪರಿಹಾರದ ಚೆಕ್ ಅನ್ನು ಬುಧವಾರ ವಿತರಿಸಿದರು.
ಕೊಟ್ಟಾರ ಚೌಕಿಯಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ರಿಕ್ಷಾ ತೋಡಿಗೆ ಬಿದ್ದು ಅದರ ಚಾಲಕ ದೀಪಕ್ ಅಚಾರ್ (42) ಮೃತಪಟ್ಟಿದ್ದರು. ಅವರ ತಾಯಿ ಚಿನ್ನಮ್ಮ ಆಚಾರ್ ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಪಾಂಡೇಶ್ವರದಲ್ಲಿ ರಿಕ್ಷಾ ತೊಳೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಜೂನ್ 27ರಂದು ರಿಕ್ಷಾ ಚಾಲಕರಾದ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ರಾಜು ಹಾಗೂ ಪುತ್ತೂರು ತಾಲ್ಲೂಕಿನ ರಾಮಕುಂಜದ ದೇವರಾಜ‌್ ಮೃತಪಟ್ಟಿದ್ದರು. ರಾಜು ಅವರ ಪತ್ನಿ ವಿಜಯ ಹಾಗೂ ದೇವರಾಜ್ ಅವರ ಪತ್ನಿ ಭವಾನಿ ಅವರಿಗೂ ಪರಿಹಾರ ನೀಡಲಾಗಿದ್ದು, ಅವರ ಬದಲಾಗಿ ಬಂಧುಗಳು ಚೆಕ್ ಸ್ವೀಕರಿಸಿದರು.
ಪಾಲಿಕೆ ಸದಸ್ಯರಾದ ಲತೀಫ್, ಮನೋಜ್ ಕುಮಾರ್, ಜಯಲಕ್ಷ್ಮೀ ಹಾಗೂ ಲೋಹಿತ್ ಅಮೀನ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.