ADVERTISEMENT

ರಸ್ತೆ ಗುಂಡಿಯಲ್ಲಿ ದೀಪ ಬೆಳಗಿ ದೀಪಾವಳಿ: ಹದಗೆಟ್ಟ ರಸ್ತೆ, ಕಣ್ತೆರೆಸುವ ಪ್ರಯತ್ನ

ಬೆಳ್ತಂಗಡಿ: ಹದಗೆಟ್ಟ ರಸ್ತೆ – ಕಣ್ತೆರೆಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:24 IST
Last Updated 28 ಅಕ್ಟೋಬರ್ 2022, 7:24 IST
ಮಂಗಳೂರು – ವಿಲ್ಲಾಪುರಂ ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಬಳಿ ಗುಂಡಿ ಬಿದ್ದ ರಸ್ತೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಲಾಯಿತು.
ಮಂಗಳೂರು – ವಿಲ್ಲಾಪುರಂ ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಬಳಿ ಗುಂಡಿ ಬಿದ್ದ ರಸ್ತೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಲಾಯಿತು.   

ಬೆಳ್ತಂಗಡಿ: ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡದ ಸರ್ಕಾರ , ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸಿ ಸಮಾನ ಮನಸ್ಕ ಯುವಕರ ತಂಡವು ಬುಧವಾರ ಸಂಜೆ ಲಾಯಿಲ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಚಾಲಕ ಸಂದೀಪ್ ಎಸ್ ಅಳದಂಗಡಿ ಮಾತನಾಡಿ, ‘ಬೆಳ್ತಂಗಡಿ ತಾಲ್ಲೂಕಿನ ರಸ್ತೆಯ ಅವ್ಯವಸ್ಥೆ ರಾಜ್ಯದಲ್ಲಿಯೇ ಕುಖ್ಯಾತಿ ಪಡೆದಿದೆ. ಸಚಿವ ಸುನೀಲ್ ಕುಮಾರ್ ಈಚೆಗೆ ಮುಖ್ಯ ರಸ್ತೆ ಬದಲಿಸಿ ಪ್ರಯಾಣಿಸಿರುವುದೇ ಇದಕ್ಕೆ ಸಾಕ್ಷಿ. ಇದು ಶಾಸಕ ಮತ್ತು ಸಂಸದರಿಗೆ ನಾಚಿಕೆ ತರುವ ವಿಚಾರ’ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ , ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಜ್ವಲ್ ಜೈನ್, ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಗಣೇಶ್ ಕಣಿಯೂರು, ಅಲ್ತಾಫ್, ಅಲ್ವಿನ್, ನೌಷದ್ ಕೈಕಂಬ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.