ADVERTISEMENT

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯ      

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 4:34 IST
Last Updated 9 ನವೆಂಬರ್ 2024, 4:34 IST
ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಹೈಕೋರ್ಟ್‌ ಪೀಠ ಹೊರಾಟ ಸಮಿತಿಯ ಬೆಳ್ತಂಗಡಿ ತಾಲ್ಲೂಕು ಘಟಕದ ಅದ್ಯಕ್ಷ ಧನಂಜಯ ರಾವ್ ಮಾತನಾಡಿದರು
ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಹೈಕೋರ್ಟ್‌ ಪೀಠ ಹೊರಾಟ ಸಮಿತಿಯ ಬೆಳ್ತಂಗಡಿ ತಾಲ್ಲೂಕು ಘಟಕದ ಅದ್ಯಕ್ಷ ಧನಂಜಯ ರಾವ್ ಮಾತನಾಡಿದರು   

ಬೆಳ್ತಂಗಡಿ: ಇಲ್ಲಿನ ವಕೀಲರ ಸಂಘ, ಹೈಕೋರ್ಟ್‌ ಪೀಠ ಹೋರಾಟ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಜತೆ ಬೆಳ್ತಂಗಡಿ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಭವನದಲ್ಲಿ ಶುಕ್ರವಾರ ಸಮಾಲೋಚನ ಸಭೆ ನಡೆಯಿತು.

ಬೆಳ್ತಂಗಡಿಯಿಂದ ಬೆಂಗಳೂರಿನ ಹೈಕೋರ್ಟ್‌ಗೆ ತೆರಳಲು 325 ಕಿ.ಮಿ. ಪ್ರಯಾಣಿಸಬೇಕಿದ್ದು, ವಸತಿ, ಇತರ ಖರ್ಚುಗಳ ಹೊರೆ ಇದೆ. ತಾಲ್ಲೂಕಿನ ಹಲವಾರು ಭೂ ನ್ಯಾಯ ಮಂಡಳಿಗೆ ಸಂಬಂಧಿಸಿದ ಪ್ರಕರಣಗಳು ಹಲವು ದಶಕಗಳಿಂದ ಹೈಕೋರ್ಟ್‌ನಲ್ಲಿ ಬಾಕಿ ಇವೆ. ಈ ಕಾರಣದಿಂದ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಹೊರಾಟ ಸಮಿತಿಯ ಬೆಳ್ತಂಗಡಿ ತಾಲ್ಲೂಕು ಘಟಕದ ಅದ್ಯಕ್ಷ ಧನಂಜಯ ರಾವ್ ಮಾತನಾಡಿ, ಮಂಗಳೂರು ವಕೀಲರ ಸಂಘದಿಂದ 1981ರಿಂದಲೇ ಹೋರಾಟ ಪ್ರಾರಂಭವಾಗಿದೆ. ಮಂಗಳೂರಿನಲ್ಲಿ ಪ್ರಾರಂಭವಾದರೆ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು

ADVERTISEMENT

ಸಭೆಯಲ್ಲಿ ಸಹಿ ಸಂಗ್ರಹ ಅಭಿಯಾನ, ವಿದ್ಯಾರ್ಥಿಗಳಲ್ಲಿ ಜಾಗೃತಿ, ಒಪ್ಪಿಗೆ ಪತ್ರ ಚಳವಳಿ, ಹೈಕೋರ್ಟ್‌ನಲ್ಲಿ ಪ್ರಕರಣ ಇರುವವರನ್ನು ಒಟ್ಟು ಸೇರಿಸುವುದು, ತಾಲ್ಲೂಕು ಮಟ್ಟದಲ್ಲಿ ಸಮಾವೇಶ ಆಯೋಜನೆ, ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೆ ಮಾಡಿ ಪೀಠ ಸ್ಥಾಪನೆಯ ಅಗತ್ಯವನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎನ್ನುವ ಅಭಿಪ್ರಾಯ ಬಂತು.

ಎಂಜಿನಿಯರ್ ಜಗದೀಶ್, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ, ಉದ್ಯಮಿಗಳಾದ ರೊನಾಲ್ಡ್ ಲೋಬೊ, ವಸಂತಶೆಟ್ಟಿ, ಜಯರಾಜ್ ಸಾಲಿಯಾನ್, ಶ್ರಿನಿವಾಸ್ ಗೌಡ, ಬಿ.ಎಂ.ಭಟ್, ಪ್ರವೀಣ್ ಫರ್ನಾಂಡಿಸ್ ಉಜಿರೆ, ವೆಂಕಣ್ಣ ಕೊಯ್ಯೂರು, ಸೇವಿಯರ್ ಪಾಲೇಲಿ ಮಾತನಾಡಿದರು.

ಪ್ರಮುಖರಾದ ಮೋನಪ್ಪ ಭಂಡಾರಿ, ಬೆಳ್ತಂಗಡಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಕಾರ್ಯದರ್ಶಿ ನವೀನ್, ಹಿರಿಯ ವಕೀಲರ ಸಂಘದ ಅದ್ಯಕ್ಷ ಅಲೋಶಿಯಸ್ ಲೋಬೊ, ಹೊರಾಟ ಸಮಿತಿ ಉಪಾದ್ಯಕ್ಷ ಶಿವಕುಮಾರ್ ಭಾಗವಹಿಸಿದ್ದರು.

ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಶೈಲೇಶ್ ಠೋಸರ್ ಸ್ವಾಗತಿಸಿದರು. ಸರ್ಕಾರಿ ಅಭಿಯೋಜಕ ಮನೋಹರ್ ಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.