ADVERTISEMENT

ಪುತ್ತೂರು | ಅಪಾಯಕಾರಿ ರಸ್ತೆ: ದುರಸ್ತಿಗೆ ಆಗ್ರಹ

ಪುತ್ತೂರು ವರ್ತಕ ಸಂಘದಿಂದ ಪೌರಾಯುಕ್ತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 14:41 IST
Last Updated 29 ಫೆಬ್ರುವರಿ 2024, 14:41 IST

ಪುತ್ತೂರು: ನಗರದ ಹಲವು ಭಾಗಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ರಸ್ತೆ  ದುರಸ್ತಿಗೆ  ಆಗ್ರಹಿಸಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಪುತ್ತೂರು ವರ್ತಕ ಸಂಘ) ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಮಾಜಿ ಅಧ್ಯಕ್ಷ ಜೋನ್ ಕುಟಿನ್ಹೊ, ಕಾರ್ಯದರ್ಶಿ ಮನೋಜ್ ಟಿ.ವಿ, ಉಲ್ಲಾಸ್ ಪೈ ನೇತೃತ್ವದ ನಿಯೋಗವು ನಗರಸಭೆಯ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಪುತ್ತೂರು ನಗರದ ಮುಖ್ಯ ರಸ್ತೆಯ ಗಾಂಧಿಕಟ್ಟೆಯ ಸಮೀಪ, ಅರುಣಾ ಕಲಾ ಮಂದಿರದ ಮುಂಭಾಗ, ಸಚಿನ್ ಟ್ರೇಡರ್ಸ್ ಹಾಗೂ ಡಾ.ಗೌರಿ ಪೈ ಮನೆಯ ಮುಂಭಾಗ, ತೆಂಕಿಲದ ವಿವೇಕಾನಂದ ಶಾಲೆಗೆ ಹೋಗುವ ಇಳಿಜಾರು ಭಾಗದ ಕಾಂಕ್ರೀಟ್ ರಸ್ತೆ  ಹಾಳಾಗಿದ್ದು,  ಪ್ರಾಣಾಪಾಯ ಸಂಭವಿಸುವ ರೀತಿಯಲ್ಲಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಈ ಅಪಾಯಕಾರಿ ರಸ್ತೆಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ  ಮಾಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.