ADVERTISEMENT

ಧರ್ಮಸ್ಥಳದ ರತ್ನಗಿರಿಯಲ್ಲಿ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 7:18 IST
Last Updated 16 ಫೆಬ್ರುವರಿ 2019, 7:18 IST
   

ಉಜಿರೆ: ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಶನಿವಾರ ಬೆಳಿಗ್ಗೆ 8.45ರ ಮೀನ ಲಗ್ನದಲ್ಲಿ ಆರಂಭವಾಯಿತು.

ಆರಂಭದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಜಲಾಭಿಷೇಕ ನಡೆಯಿತು. ದಿವ್ಯ, ಜನಮಂಗಳ, ಶ್ರದ್ಧಾ ಕಲಶಗಳಿಂದ ಬಾಹುಬಲಿಗೆ ಅಭಿಷೇಕ ಪೂರ್ಣವಾಯಿತು.

ಜಲಾಭಿಷೇಕ ಮುಗಿದು ದ್ರವ್ಯಾಭಿಷೇಕ ನಡೆಯುತ್ತಿದೆ.ಮೊದಲಿಗೆ ಎಳನೀರು ಅಭಿಷೇಕ ನಡೆಯಿತು. ರತ್ನಗಿರಿಯಲ್ಲಿಮಂಗಳ ಜಯಘೋಷ, ಭಜನೆ, ಕೀರ್ತನೆಗಳ ನಾದ ಮೊಳಗುತ್ತಿದೆ. ಸಾವಿರಾರು ಭಕ್ತರು ಅಭಿಷೇಕ ನೋಡಲು ಕಾತರದಿಂದ ಕಾದಿದ್ದಾರೆ.

ADVERTISEMENT

ನಾಳಿಕೇರ, ಕಬ್ಬಿನರಸ, ಕ್ಷೀರಭಿಷೇಕ, ಅಕ್ಕಿಹಿಟ್ಟು, ಅರಶಿನ, ಕಷಾಯ ಚತುಷ್ಕೋನ ಅಭಿಷೇಕ, ಚಂದನ, ಅಷ್ಟಗಂಧ ಅಭಿಷೇಕ ನಡೆಯಲಿವೆ. ಬಳಿಕ ಪುಷ್ಪವೃಷ್ಟಿ, ಪೂರ್ಣಕುಂಭ ಅಭಿಷೇಕ ಮಂತ್ರ ನಡೆಯಲಿದೆ.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಬಾಹುಬಲಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನೆರವೇರಲಿದೆ.

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ರತ್ನಗಿರಿಗೆ ಹೋಗಿ ಮಹಾಮಸ್ತಕಾಭಿಷೇಕ ನೋಡಲು ಉಚಿತ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.