ADVERTISEMENT

ದಕ್ಷಿಣ ಕನ್ನಡ | ಜಿಲ್ಲೆಯಲ್ಲಿ ಶೇ 37.90 ಫಲಿತಾಂಶ

ಎಸ್‌ಎಸ್‌ಎಸ್‌ಸಿ–2 ಪರೀಕ್ಷೆ: ಮೂಡುಬಿದಿರೆ ಬ್ಲಾಕ್‌ ಗರಿಷ್ಠ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:32 IST
Last Updated 10 ಜುಲೈ 2024, 14:32 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮಂಗಳೂರು: ಎಸ್‌ಎಸ್‌ಎಲ್‌ಸಿ–2 ಪರೀಕ್ಷೆಯಲ್ಲಿ ಮಂಗಳೂರು ಶೈಕ್ಷಣಿಕ ಜಿಲ್ಲೆ ಶೇ 37.90 ಫಲಿತಾಂಶ ಗಳಿಸಿದ್ದು ಮೂಡುಬಿದಿರೆ ಬ್ಲಾಕ್‌ ಗರಿಷ್ಠ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ 1555 ವಿದ್ಯಾರ್ಥಿಗಳು ಮತ್ತು 582 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಒಟ್ಟು 810 ಮಂದಿ ತೇರ್ಗಡೆ ಹೊಂದಿದ್ದಾರೆ. ಪಾಸಾದವರ ಪೈಕಿ 325 ವಿದ್ಯಾರ್ಥಿನಿಯರು ಎಂದು ಡಿಡಿಪಿಐ ವೆಂಕಟೇಶ ಪಟಗಾರ ತಿಳಿಸಿದ್ದಾರೆ.

ADVERTISEMENT

ಮೂಡುಬಿದಿರೆ ಬ್ಲಾಕ್‌ನಲ್ಲಿ 116 ಮಂದಿ ಪರೀಕ್ಷೆ ಬರೆದಿದ್ದು 53 ಮಂದಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳ ಬ್ಲಾಕ್‌ನಲ್ಲಿ ಅತಿ ಕಡಿಮೆ ಶೇ 28.51 ಮಂದಿ ತೇರ್ಗಡೆ ಹೊಂದಿದ್ದಾರೆ. ಇಲ್ಲಿ 470 ಮಂದಿ ಪರೀಕ್ಷೆ ಬರೆದಿದ್ದರು.

ಪುತ್ತೂರು ಬ್ಲಾಕ್‌ನಲ್ಲಿ ಶೇ 45.15ರಷ್ಟು ಸಾಧನೆ ಆಗಿದೆ. ಇಲ್ಲಿ ಪರೀಕ್ಷೆ ಬರೆದ 259 ವಿದ್ಯಾರ್ಥಿಗಳ ಪೈಕಿ 117 ಮಂದಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳ ಬ್ಲಾಕ್‌ನಲ್ಲಿ ಅತಿ ಕಡಿಮೆ ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 470 ಮಂದಿ ಪೈಕಿ 134 ಮಂದಿ ತೇರ್ಗಡೆ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಬೆಳ್ತಂಗಡಿ ಬ್ಲಾಕ್‌ನಲ್ಲಿ 207ರ ಪೈಕಿ 90 (ಶೇ 43.48), ಮಂಗಳೂರು ಉತ್ತರದಲ್ಲಿ 539ರ ಪೈಕಿ 223 (ಶೇ 41.37), ಮಂಗಳೂರು ದಕ್ಷಿಣದಲ್ಲಿ 397ರ ಪೈಕಿ 131 (ಶೇ33) ಮತ್ತು ಸುಳ್ಯದಲ್ಲಿ 149ರ ಪೈಕಿ 62 (ಶೇ 41.61) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.