ADVERTISEMENT

ಮಂಗಳೂರು | 'ಎಜು ಫ್ಲರಿಶ್' ಲಾಂಛನ ಬಿಡುಗಡೆ ನಾಳೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:47 IST
Last Updated 6 ಅಕ್ಟೋಬರ್ 2024, 5:47 IST

ಮಂಗಳೂರು: ‘ಎಜು ಫ್ಲರಿಶ್' ಶೈಕ್ಷಣಿಕ ನಿರ್ವಹಣಾ ಕಂಪನಿಯ ಲಾಂಛನ ಅನಾವರಣ ಕಾರ್ಯಕ್ರಮ ಇದೇ 7 ರಂದು ಸಂಜೆ 5ಕ್ಕೆ ನಗರದ ಹೋಟೆಲ್‌ ಎ.ಜೆ.ಗ್ರ‍್ಯಾಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿಯ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದೀಪಾಲಿ ಶೆಣೈ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಕಾರ್ಯಕ್ರಮದಲ್ಲಿ ಎ.ಜೆ ಸಮೂಹ ಸಂಸ್ಥೆಗಳ ಎ.ಜೆ. ಶೆಟ್ಟಿ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಭಾರತ್ ಅಕಾಡೆಮಿ ಟ್ರಸ್ಟಿ  ಡಾ.ವಿಂಧ್ಯಾ ಪೈ, ಬೆಸೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಣೆಲಾ ಅಣ್ಣಪ್ಪ ನಾಯಕ್ ಭಾಗವಹಿಸುವರು. ಶಿಕ್ಷಣ ಸಂಸ್ಥೆಗಳ ಕಲಿಕೆಯ ಪರಿಸರ  ಸುಧಾರಣೆ, ಸುಗಮ ಆಡಳಿತ, ಮತ್ತು ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಕಂಪನಿ  ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ನೆರವಾಗಲಿದೆ' ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಪನಿಯ ಸಹಾಯಕ ಕಾರ್ಯಾಚರಣೆ ವ್ಯವಸ್ಥಾಪಕರಾದ ಸಚಿತ್ ಪೈ, ಟೀನಾ ರೆಬೆಲ್ಲೊ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಸಾತ್ವಿಕ್ ಎಚ್.ವಿ. ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.