ಉಪ್ಪಿನಂಗಡಿ: ‘ರಂಜಾನ್ ತಿಂಗಳ ಉಪವಾಸ ವ್ರತ ಅಂತ್ಯದೊಂದಿಗೆ ಆತ್ಮ ಶುದ್ಧೀಕರಣ ಮತ್ತು ಪರಸ್ಪರ ಸಹೋದರತೆ, ಶಾಂತಿ, ಐಕ್ಯತೆಯ ಪ್ರತೀಕದ ಸಂದೇಶದೊಂದಿಗೆ ಆಚರಿಸುವ ಮುಸ್ಲಿಮರ ಪವಿತ್ರ ಈದ್-ಉಲ್-ಫಿತ್ರ್ ಹಬ್ಬವನ್ನು ಗಂಡಿಬಾಗಿಲು ಪರಿಸರದ ಮಂದಿ ಸಡಗರ ಸಂಭ್ರಮದೊಂದಿಗೆ ಶನಿವಾರ ಆಚರಿಸಿದರು.
ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಆಲಿ ಫೈಝಿ ಖುತುಬಾ ಪಾರಾಯಣ, ವಿಶೇಷ ನಮಾಜು ಮತ್ತು ಪ್ರಾರ್ಥನೆ ನೆರವೇರಿಸಿದರು. ಹಬ್ಬದ ಸಂದೇಶ ನೀಡಿದ ಅವರು, ’ರಂಜಾನ್ ತಿಂಗಳಲ್ಲಲಿ ಮಾಡಿರುವ ಪ್ರಾರ್ಥನೆ, ವರ್ಷಪೂರ್ತಿ ಪ್ರೇರಣೆ ಆಗಲಿ, ಶಾಂತಿ, ಸೌಹಾರ್ದತೆ, ಐಕ್ಯತೆ ಎಲ್ಲೆಡೆ ನೆಲೆಗೊಳ್ಳಲಿ’ ಎಂದರು.
ಹೊಸ ಬಟ್ಟೆ ಧರಿಸಿ ಮುಸ್ಲಿಂ ಬಾಂಧವರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು ಮಸೀದಿಯಲ್ಲಿ ನಡೆದ ನಮಾಜು, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.