ADVERTISEMENT

ಪುತ್ತೂರು | ರಸ್ತೆ ಮೇಲೆ ವಿದ್ಯುತ್ ಕಂಬ: ವಾಹನ ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 13:52 IST
Last Updated 6 ಜುಲೈ 2024, 13:52 IST
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ-ಕಾಪಿಕಾಡು-ದೇವಸ್ಯ ರಸ್ತೆಯ ಮೊಡಪ್ಪಾಡಿ ಮೂಲೆ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದು
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ-ಕಾಪಿಕಾಡು-ದೇವಸ್ಯ ರಸ್ತೆಯ ಮೊಡಪ್ಪಾಡಿ ಮೂಲೆ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದು   

ಪುತ್ತೂರು: ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ-ಕಾಫಿಕಾಡು-ದೇವಸ್ಯ ರಸ್ತೆಯ ಮೊಡಪ್ಪಾಡಿ ಮೂಲೆ ಎಂಬಲ್ಲಿ ಮರವೊಂದು ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಪುತ್ತೂರು- ಸಂಟ್ಯಾರು- ಪಾಣಾಜೆ ರಸ್ತೆಯ ಕೈಕಾರದಿಂದ ಕಾಪಿಕಾಡು ಮೂಲಕವಾಗಿ ಪುತ್ತೂರು -ಪರ್ಲಡ್ಕ- ಕುಂಜೂರುಪಂಜ -ಪಾಣಾಜೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೊಡಪ್ಪಾಡಿಮೂಲೆ ಎಂಬಲ್ಲಿ ಮರವೊಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಲೈನ್‌ ಮೇಲೆ ಬಿದ್ದಿದೆ. ಇದರಿಂದ ಎರಡು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆಯ ಮೇಲೆ ಬಿದ್ದಿದ್ದವು.  ಮೆಸ್ಕಾಂ ಪವರ್‌ಮೆನ್‌ಗಳು ಸ್ಥಳಕ್ಕೆ ಬಂದು ಉರುಳಿಬಿದ್ದ ವಿದ್ಯುತ್ ಕಂಬಗಳನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT