ADVERTISEMENT

ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 5:32 IST
Last Updated 20 ಜೂನ್ 2024, 5:32 IST
ಉಪ್ಪಿನಂಗಡಿ ಸಮೀಪ ಶಿರಾಡಿಯಲ್ಲಿ ಅಡಿಕೆ ತೋಟ ಹಾನಿಗೊಳಿಸಿರುವ ಕಾಡಾನೆ
ಉಪ್ಪಿನಂಗಡಿ ಸಮೀಪ ಶಿರಾಡಿಯಲ್ಲಿ ಅಡಿಕೆ ತೋಟ ಹಾನಿಗೊಳಿಸಿರುವ ಕಾಡಾನೆ    

ನೆಲ್ಯಾಡಿ(ಉಪ್ಪಿನಂಗಡಿ): ಶಿರಾಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡು ತೋಟದೊಳಗೆ ನುಗ್ಗಿ ಬೆಳೆ  ಹಾನಿಗೊಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಶಿರಾಡಿ ನಿವಾಸಿ ದಿವಾಕರ ಗೌಡ ಎಂಬುವರ ತೋಟಕ್ಕೆ ಆರು ಆನೆಗಳಿದ್ದ ಹಿಂಡು ದಾಳಿ ನಡೆಸಿದ್ದು, ಅಡಿಕೆ, ತೆಂಗು, ಬಾಳೆ ಬೆಳೆಯನ್ನು ತುಳಿದು ನಾಶಪಡಿಸಿವೆ. ತೋಟಕ್ಕೆ ನೀರಾವರಿ ಸಂಪರ್ಕಕ್ಕೆ ಅಳವಡಿಸಿರುವ ಸ್ಪ್ರಿಂಕ್ಲರ್‌ಗಳನ್ನು ತುಳಿದು ಪುಡಿಮಾಡಿದೆ.

ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.