ಬೆಳ್ತಂಗಡಿ: ಮೂರು ದಿನಗಳಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಆಗಾಗ ಕಂಡು ಬರುತ್ತಿದ್ದು, ವಾಹನ ಸವಾರರು ಭಯಗೊಂಡಿದ್ದಾರೆ.
ಭಾನುವಾರ ರಾತ್ರಿ ಒಂದನೇ ತಿರುವಿನ ಸಮೀಪ ಕಾಡಾನೆ ಕಂಡುಬಂದಿತ್ತು. ಸೋಮವಾರ ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಬಳಿಯೂ ಕಾಡಾನೆಯನ್ನು ಕಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 2ನೇ ತಿರುವಿನ ಬಳಿ ಆನೆ ರಸ್ತೆ ಮಧ್ಯೆ ನಿಂತು ಈಚಲ ಮರವನ್ನು ತಿನ್ನುತ್ತಿತ್ತು.
ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರವಾಗಿ ಕಂಡು ಬರುತ್ತಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.