ADVERTISEMENT

ಸೆ.30ರೊಳಗೆ ಉದ್ಯೋಗ ಭರವಸೆ ಪೂರ್ಣ: ಜಿಪಿಎಂಎಲ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 7:55 IST
Last Updated 18 ಸೆಪ್ಟೆಂಬರ್ 2024, 7:55 IST
ಬ್ರಿಜೇಶ್ ಚೌಟ
ಬ್ರಿಜೇಶ್ ಚೌಟ   

ಮಂಗಳೂರು: ಎಸ್‌ಇಝಡ್‌ಗೆ ಭೂಮಿ ನೀಡಿ, ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದವರಿಗೆ ಹೊಸ ಆಶಾಭಾವ ಮೂಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸೂಚನೆಯಂತೆ, ಭೂಮಿ ನೀಡಿದವರಿಗೆ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಸೆ.30ರೊಳಗಾಗಿ ಪೂರ್ಣಗೊಳಿಸುವುದಾಗಿ ಗೇಲ್ ಮಂಗಳೂರು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಜಿಪಿಎಂಎಲ್) ಕಂಪನಿಯ ಅಧ್ಯಕ್ಷರು ಭರವಸೆ ನೀಡಿದ್ದಾರೆ.

ವಿಶೇಷ ಆರ್ಥಿಕ ವಲಯಕ್ಕೆ (ಎಂಎಸ್‌ಇಝಡ್) ವಶಪಡಿಸಿಕೊಂಡಿದ್ದ ಭೂಮಿಯನ್ನು ಜೆಬಿಎಲ್‌ ಪೆಟ್ರೊಕೆಮಿಕಲ್ಸ್ ಕಂಪನಿಗೆ ನೀಡಲಾಗಿತ್ತು. ನಷ್ಟದಲ್ಲಿದ್ದ ಈ ಕಂಪನಿಯನ್ನು ಜಿಎಂಪಿಎಲ್ ಖರೀದಿಸಿತ್ತು. ಮೂಲ ಒಪ್ಪಂದದಂತೆ ಜೆಬಿಲ್ ಸ್ಥಳಾಂತರಗೊಂಡಿದ್ದ 115 ಕುಟುಂಬಗಳಿಗೆ ಪೂರ್ಣಾವಧಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ, ಜಿಪಿಎಂಎಲ್ ಗುತ್ತಿಗೆ ಆಧಾರಿತ ಉದ್ಯೋಗವನ್ನು ಪರಿಗಣಿಸಿತ್ತು. ಈ ಸಂಬಂಧ ಭೂಮಿ ಕಳೆದುಕೊಂಡವರು ಸಂಸದರ ಕಚೇರಿ ಸಂಪರ್ಕಿಸಿದ್ದರು. ಈ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ಸಿಂಗ್ ಪುರಿ ಅವರೊಂದಿಗೆ ಚರ್ಚಿಸಲಾಗಿತ್ತು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. 

ಪರಿಣಾಮವಾಗಿ, ಸಚಿವರು, ಜಿಪಿಎಂಎಲ್ ಕಂಪನಿಗೆ ಸೂಚನೆ ನೀಡಿದ್ದು, ಕಂಪನಿ ಅಧ್ಯಕ್ಷರಿಂದ ಸೆ.30ರೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಪತ್ರ ಬಂದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.