ADVERTISEMENT

ಮಂಗಳೂರು | ಬಂದರು: ಹೆಂಚಿನ ಮನೆಯಲ್ಲಿ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 10:41 IST
Last Updated 6 ಏಪ್ರಿಲ್ 2024, 10:41 IST
<div class="paragraphs"><p>ಅವಘಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ</p></div>

ಅವಘಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ

   

ಮಂಗಳೂರು: ನಗರದ ಬಂದರ್‌ನ ಜಿ.ಎಂ. ರಸ್ತೆ ಬಳಿಯ ಹಳೆ ಮಂಗಳೂರು ಹೆಂಚಿನಿಂದ ನಿರ್ಮಿಸಿದ್ದ ಮನೆಯೊಂದರಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಒಳಗಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಪಾಂಡೇಶ್ವರದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಿ.ಆರ್. ರಂಗನಾಥ ಅವರು ತಿಳಿಸಿದ್ದಾರೆ.

ADVERTISEMENT

‘ಬೆಂಕಿಯಿಂದ ಮನೆಯ ಚಾವಣಿ ಪೂರ್ತಿ ನಾಶವಾಗಿದೆ. ಬೆಂಕಿ ಅವಘಡ ಸಂಭವಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆ ಬೆಂಕಿ ತಗುಲಿರುವುದನ್ನು ಸ್ಥಳೀಯರು ಗಮನಿಸಿ ಅಗ್ನಿಶಾಮಕ ಠಾಣೆಗೆ ಬೆಳಿಗ್ಗೆ 11.15ಕ್ಕೆ ಮಾಹಿತಿ ನೀಡಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಈ ಮನೆಯು ಮೊದಲ ಖತೀಜಮ್ಮ ಅವರಿಗೆ ಸೇರಿದ್ದು, ಅವರ ಕುಟುಂಬದವರು ಕಟ್ಟಡದಲ್ಲಿ ವಾಸವಾಗಿದ್ದರು. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಅಗ್ನಿಶಾಮಕ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.