ಕಾಸರಗೋಡು: ನೀಲೇಶ್ವರದ ಅಂಞೂಟ್ಟಂಬಲಂ ವೀರರ್ಕಾವ್ ದೇವಸ್ಥಾನದಲ್ಲಿ ಈಚೆಗೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕಣ್ಣೂರು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೀಲೇಶ್ವರದ ತೆರ್ವಯಲ್ ನಿವಾಸಿ ಪಿ.ಸಿ.ಪದ್ಮನಾಭನ್ (75) ಮೃತಪಟ್ಟಿದ್ದಾರೆ. ಪಟಾಕಿ ಸ್ಫೋಟದಲ್ಲಿ ಕಿಣಾವೂರು ನಿವಾಸಿ ರಂಜಿತ್, ರತೀಶ್, ಸಂದೀಪ್, ಚೆರುವತ್ತೂರು ಓರ್ಕುಳಂ ನಿವಾಸಿ ಶಿಬಿನ್ ರಾಜ್, ಕರಿಂದಳಂ ಕೊಲ್ಲಂಪಾರೆ ನಿವಾಸಿ ಕೆ.ಬಿಜು ಮೃತಪಟ್ಟಿದ್ದರು.
ಪುತ್ರಿಯ ವಿವಾಹ ವೇದಿಕೆಯಲ್ಲಿ ಕುಸಿದು ಮೃತಪಟ್ಟ ತಂದೆ
ಕಾಸರಗೋಡು: ಮೊಗ್ರಾಲ್ ಪುತ್ತೂರಿನಲ್ಲಿ ಪುತ್ರಿಯ ವಿವಾಹ ವೇದಿಕೆಯಲ್ಲಿ ತಂದೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಂಗಲೂರಿನ ಕಾಸಿರ್ ಗುಡ್ಡೆ ನಿವಾಸಿ ಅಬ್ದುಲ್ ಬಶೀರ್ (50) ಮೃತಪಟ್ಟವರು. ಅವರ ಪುತ್ರಿ ಮುಹಸೀನಾ ಅವರ ವಿವಾಹ ನಡೆಯುತ್ತಿದ್ದಾಗ ವೇದಿಕೆಯಲ್ಲಿ ಆಸನದಲ್ಲಿ ಕುಳಿತಿದ್ದ ಅಬ್ದುಲ್ ಬಶೀರ್ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.