ಪುತ್ತೂರು: ‘ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಗುಣಗಳನ್ನು ರೂಪಿಸುವಲ್ಲಿ ಫುಡ್ ಫೆಸ್ಟ್‌ನಂತಹ ಕಾರ್ಯಕ್ರಮಗಳು ಮಾದರಿ’ ಎಂದು ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಪ್ರಕಾಶ್ ಮೆಂತೇರೂ ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಹೆಚ್ಚಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಫುಡ್ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪುಷ್ಪಾ ಎನ್., ಅಭಿಷೇಕ್ ಸುವರ್ಣ ಇದ್ದರು.ವ್ಯವಹಾರ ಅಧ್ಯಯನ ಸಂಘದ ಅಧ್ಯಕ್ಷ ಸುಹೇಲ್ ವಂದಿಸಿದರು. ಪ್ರಾಧ್ಯಾಪಕ ಪ್ರಶಾಂತ್ ರೈ ನಿರೂಪಿಸಿದರು.
ವಿದ್ಯಾರ್ಥಿಗಳು ಸ್ಥಳದಲ್ಲೇ ಆರೋಗ್ಯಕರ ಪೇಯ, ತಿನಿಸುಗಳು, ವಿವಿಧ ಬಗೆಯ ಮೊಜಿಟೊ ತಯಾರಿಸಿದರು. ಮನೆಯಲ್ಲಿ ತಯಾರಿಸಿದ ಕರಾವಳಿಯ ವಿಶೇಷ ಖಾದ್ಯಗಳ ಮಳಿಗೆ, ಚಾಟ್ ಮಳಿಗೆ ಗಮನ ಸೆಳೆಯಿತು. ಅಧ್ಯಾಪಕರು, ವಿದ್ಯಾರ್ಥಿಗಳು ಮಳಿಗೆಗಳಿಗೆ ಭೇಟಿ ನೀಡಿ, ತಿನಿಸುಗಳನ್ನು ಸವಿದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
Cut-off box - ‘ಕೌಶಲ ಕಲಿಕೆ’ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಗೌಡ ಮಾತನಾಡಿ ‘ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಜೀವನ ರೂಪಿಸಲು ಬೇಕಾದ ಕೌಶಲಗಳನ್ನು ಕಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.