ಮಂಗಳೂರು: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ನಗರದ ಅಲ್ ಫರ್ಖಾನ್ ಶಾಲಾ ತಂಡ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಿಯ ಬಾಲಕರ ವಿಭಾಗದ ಲೀಗ್ ಹಂತದಲ್ಲಿ ಜಯ ಗಳಿಸಿತು.
ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಸಂಸ್ಥೆ ನೆಹರೂ ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಜೀಶನ್ ನೇತೃತ್ವದ ತಂಡ ಕೋಟೆಕಾರ್ನ ರಹಮಾನಿಯ ವಿರುದ್ಧ ಪೆನಾಲ್ಟ್ ಶೂಟೌಟ್ನಲ್ಲಿ 2–1ರಿಂದ ಮಣಿಸಿತು.
ಬದ್ರಿಯಾ ಕಂದಕ್ ತಂಡ ಕೇಂಬ್ರಿಜ್ ಶಾಲೆ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 5–4ರಿಂದ, ಎಆರ್ಕೆ ಕಸಬಾ ತಂಡ ಕುದ್ರೋಳಿಯ ಮೌಲನಾ ಆಜಾದ್ ಶಾಲೆ ವಿರುದ್ಧ 5–3ರಲ್ಲಿ ಜಯ ಸಾಧಿಸಿತು.
ಜಾಯ್ಲ್ಯಾಂಡ್ ವಿರುದ್ಧ ಮಿಲಾಗ್ರಿಸ್ ಶಾಲೆ 4–3ರಲ್ಲಿ, ಸಹಾರ ವಿರುದ್ಧ ಕಣಚೂರು ಶಾಲೆ 3–1ರಲ್ಲಿ, ಸ್ನೇಹಾ ವಿರುದ್ಧ ಕುನ್ನಿಲ್ ಅಕಾಡೆಮಿ 1–0ಯಿಂದ, ಮಣಿಪಾಲ್ ವಿರುದ್ಧ ಯೆನೆಪೋಯ 2–0ಯಿಂದ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.