ADVERTISEMENT

ಉಪ್ಪಿನಂಗಡಿ | ಬಂದಾರು ಗ್ರಾಮಕ್ಕೆ ಮತ್ತೆ ಲಗ್ಗೆಯಿಟ್ಟ ಕಾಡಾನೆ: ಕೃಷಿ ಹಾನಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 13:14 IST
Last Updated 21 ಜೂನ್ 2024, 13:14 IST
ಉಪ್ಪಿನಂಗಡಿ ಸಮೀಪ ಬಂದಾರು ಗ್ರಾಮದ ಓಟೆಕ್ಕಾರು ಎಂಬಲ್ಲಿ ಮಹೇಶ್ ಎಂಬುವರ ತೋಟದೊಳಗೆ ಕಾಡಾನೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ
ಉಪ್ಪಿನಂಗಡಿ ಸಮೀಪ ಬಂದಾರು ಗ್ರಾಮದ ಓಟೆಕ್ಕಾರು ಎಂಬಲ್ಲಿ ಮಹೇಶ್ ಎಂಬುವರ ತೋಟದೊಳಗೆ ಕಾಡಾನೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ   

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಂದಾರು ಗ್ರಾಮದ ಓಟೆಚ್ಚಾರು ಬಳಿಯ ನಾಗಳಿಕೆ ಎಂಬಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು ಸಮೀಪದ ತೋಟದೊಳಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ.

ಮಹೇಶ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆ ಗಿಡ, ಅಡಿಕೆ ಗಿಡಗಳನ್ನು ನಾಶಪಡಿಸಿದೆ. ತಿಂಗಳ ಹಿಂದೆ ಈ ಭಾಗದಲ್ಲಿ ಆಗಾಗ್ಗ ಎರಡು ಕಾಡಾನೆಗಳು ಅಲ್ಲಲ್ಲಿ ಕೃಷಿ ಹಾನಿ ಮಾಡುತ್ತಿದ್ದವು. ಅದನ್ನು ಕಾಡಿಗೆ ಓಡಿಸುವ ಕೆಲಸ ಅರಣ್ಯಾಧಿಕಾರಿಗಳಿಂದ ನಡೆದಿತ್ತು. ಕಾಡಾನೆಯ ಉಪಟಳ ನಿಂತಿತು ಎಂದು ಇಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು, ಜನರು ಮತ್ತೆ ಆತಂಕ ಪಡುವಂತಾಗಿದೆ. ನದಿಯ ಇನ್ನೊಂದು ಭಾಗದಲ್ಲಿರುವ ಕಾಡು ಪ್ರದೇಶದಿಂದ, ಆನೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT