ADVERTISEMENT

ಎಡನೀರು ಮಠದಲ್ಲಿ ಗಮಕ ಶ್ರಾವಣ ಸರಣಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:49 IST
Last Updated 9 ಆಗಸ್ಟ್ 2024, 16:49 IST
ಬದಿಯಡ್ಕ ಸಮೀಪದ ಎಡನೀರು ಮಠದಲ್ಲಿ ಗಮಕ ಶ್ರಾವಣ ಸರಣಿ ಕಾರ್ಯಕ್ರಮಕ್ಕೆ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಚಾಲನೆ ನೀಡಿದರು
ಬದಿಯಡ್ಕ ಸಮೀಪದ ಎಡನೀರು ಮಠದಲ್ಲಿ ಗಮಕ ಶ್ರಾವಣ ಸರಣಿ ಕಾರ್ಯಕ್ರಮಕ್ಕೆ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಚಾಲನೆ ನೀಡಿದರು   

ಬದಿಯಡ್ಕ: ‘ಗಮಕ ಕಲೆಯು ಭಾರತೀಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಉತ್ತಮ ಮಾಧ್ಯಮ. ಶ್ರಾವಣ ಮಾಸದಲ್ಲಿ ರಾಮಾಯಣದ ಪುಣ್ಯಕಥೆಯ ಪ್ರಚಾರ ಸ್ತುತ್ಯರ್ಹ. ಇದು ಭಾರತೀಯ ಸಂಸ್ಕೃತಿಯ ಜೀವಾಳ’ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಎಡನೀರು ಮಠದಲ್ಲಿ ‘ಗಮಕ ಶ್ರಾವಣ’ದ ಸರಣಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ಟ ವಹಿಸಿದ್ದರು.

ADVERTISEMENT

ತೊರವೆ ರಾಮಾಯಣದಿಂದ ಆಯ್ದ ಶ್ರೀರಾಮ ಜನನದ ಭಾಗವನ್ನು ಗಮಕಿಗಳಾದ ಶಶಿರಾಜ ನೀಲಂಗಳ (ವಾಚನ), ಗಮಕಿ ಶ್ರೀಹರಿ ಭಟ್ ಪೆಲ್ತಾಜೆ (ವ್ಯಾಖ್ಯಾನ) ಮಾಡಿದರು. ಜಯನಾರಾಯಣ ತಾಯನ್ನೂರು ಸ್ವಾಗತಿಸಿ, ವಂದಿಸಿದರು. ವಿ.ಬಿ.ಕುಳಮರ್ವರು ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಗಮಕ ಗೀತೆಯನ್ನು ಶಶಿರಾಜ ನೀಲಂಗಳ ಹಾಡಿದರು. ರಾಜೇಂದ್ರ ಕಲ್ಲೂರಾಯ, ವಿ.ಬಿ.ಕುಳಮರ್ವ, ಲಲಿತಾಲಕ್ಷ್ಮೀ ಕುಳಮರ್ವ, ಗಣೇಶ ಪ್ರಸಾದ ಪಾಣೂರು, ಶಾಮಭಟ್ ಪೇರಡ್ಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.