ಮಂಗಳೂರು: ಬೆಳ್ಳುಳ್ಳಿ ದರ ಏರುಗತಿಯಲ್ಲಿ ಸಾಗಿದ್ದು, 10 ದಿನಗಳಲ್ಲಿ ಪ್ರತಿ ಕೆ.ಜಿ.ಯ ಮೇಲೆ ₹100ರಷ್ಟು ಹೆಚ್ಚಳವಾಗಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆ.ಜಿ.ಯೊಂದಕ್ಕೆ ₹250 ಇದ್ದಿದ್ದು, ಪ್ರಸ್ತುತ ₹370ರಷ್ಟಾಗಿದೆ.
ಮೂರು ಮಾದರಿಯ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತದೆ. ಸಣ್ಣ ಗಾತ್ರದ ಬೆಳ್ಳುಳ್ಳಿಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹200ರಷ್ಟು ಇತ್ತು, ಇದರ ಬೆಲೆ ಈಗ ₹300ಕ್ಕೆ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಬಂದರಿನ ವ್ಯಾಪಾರಿ ರಮೇಶ್.
‘ಒಂದು ತಿಂಗಳಿನಿಂದ ಬೆಳ್ಳುಳ್ಳಿ ದರ ಏರುತ್ತಲೇ ಇದೆ. ಈಗ ಮತ್ತಷ್ಟು ಹೆಚ್ಚಾಗಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹400 ತಲುಪಿದೆ. ಬೆಳೆ ಕಡಿಮೆ ಆಗಿರುವ ಕಾರಣಕ್ಕೆ ದರ ಏರಿಕೆಯಾಗಿದ್ದು, ಸದ್ಯದಲ್ಲಿ ಪೂರೈಕೆಯಲ್ಲಿ ಕೊರತೆ ಆಗಿಲ್ಲ’ ಎನ್ನುತ್ತಾರೆ ಸಗಟು ವ್ಯಾಪಾರಿ ಲೋಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.