ADVERTISEMENT

ಗ್ರಾ.ಪಂ. ಗ್ರಾಮದ ಹೃದಯಭಾಗ: ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 14:26 IST
Last Updated 17 ನವೆಂಬರ್ 2024, 14:26 IST
ಕುರ್ನಾಡು ಗ್ರಾಮ ಪಂಚಾಯಿತಿ  ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿದರು
ಕುರ್ನಾಡು ಗ್ರಾಮ ಪಂಚಾಯಿತಿ  ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿದರು   

ಮುಡಿಪು: ಗ್ರಾಮ ಪಂಚಾಯಿತಿ ಗ್ರಾಮದ ಹೃದಯ ಭಾಗ. ಕುರ್ನಾಡು ಗ್ರಾಮ ಪಂಚಾಯಿತಿ ಹಳೆಯ ಕಚೇರಿಯ ಸ್ಥಳದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಆಗಬೇಕೆಂಬುದು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿತ್ತು. ಈಗ ಎಲ್ಲರ ಸಹಕಾರದೊಂದಿಗೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ’ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್  ಹೇಳಿದರು.

ಮುಡಿಪುವಿನಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ನಾವು ಶಾಶ್ವತವಲ್ಲ, ಆದರೆ, ನಾವು ಮಾಡುವ ಕೆಲಸಗಳು ಯಾವಾಗಲೂ ಶಾಶ್ವತವಾಗಿರುತ್ತದೆ. ಉತ್ತಮ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ. ಕುರ್ನಾಡು ಗ್ರಾಮ ಪಂಚಾಯಿತಿ ಕಚೇರಿ, ಮುಡಿಪುವಿನ ಮುಕುಟವಾಗಿ ರೂಪುಗೊಳ್ಳಲಿ’ ಎಂದರು.

ADVERTISEMENT

ಕುರ್ನಾಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಲಾಕ್ಷಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರ ದೇವಿ ಪ್ರಸಾದ್ ಪೊಯ್ಯತ್ತಾಯ, ಮುಖಂಡರಾದ ಚಂದ್ರಹಾಸ್ ಕರ್ಕೇರ, ಗಣೇಶ್ ನಾಯ್ಕ್, ಇಬ್ರಾಹಿಂ ನಡುಪದವು, ರಮೇಶ್ ಶೇಣವ ಮುಡಿಪು, ಅಬ್ದುಲ್ ಜಲೀಲ್ ಮೊಂಟುಗೋಳಿ, ನಾಸೀರ್ ನಡುಪದವು, ಅರುಣ್ ಡಿಸೋಜ, ಝುಬೈರ್ ಇದ್ದರು.

ಪಂಚಾಯಿತಿ ಉಪಾಧ್ಯಕ್ಷ ಅಶ್ರಫ್ ಎಂ.ಕೆ ಸ್ವಾಗತಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೇಶವ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.