ADVERTISEMENT

ಗ್ಯಾರಂಟಿ ಟೀಕಿಸಿ ವಾಟ್ಸ್‌ಆ್ಯಪ್‌ ಸ್ಟೇಟಸ್‌: ಶಿಕ್ಷಕನ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:22 IST
Last Updated 19 ನವೆಂಬರ್ 2024, 14:22 IST
ವಾಟ್ಸ್‌ಆ್ಯಪ್‌
ವಾಟ್ಸ್‌ಆ್ಯಪ್‌    

ಪುತ್ತೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ  ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.

ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಪಾಪೆಮಜಲು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಹರಿಪ್ರಸಾದ್ ಕೊಂಗಾಜೆ ಅವರು, `ಗೃಹಲಕ್ಷ್ಮಿ ಹಣ ಕೂಡಿಟ್ಟು ಹೊಸ ಪೋನ್ ತೆಗೆದುಕೊಂಡರು, ಊರಿಗೆ ಹೋಳಿಗೆ ಊಟ ಹಾಕಿಸಿದರು, ಲೈಬ್ರರಿ ಮಾಡಿಕೊಟ್ಟರು, ಸೊಸೆಗೆ ಅಂಗಡಿ ಇಟ್ಟು ಕೊಟ್ಟರು, ಬಸ್‌ನಲ್ಲಿ ಉಚಿತವಾಗಿ ಊರೂರು ತಿರುಗಿ ದೇವರ ದರ್ಶನ ಮಾಡಿಬಂದರು....ಆದರೆ, ಮರಳಿ ಮನೆಗೆ ಬಂದಾಗ ಗಂಡನ ಹೆಸರಿನಲ್ಲಿದ್ದ ಜಮೀನು `ಜಮೀರ್' ಪಾಲಾಗಿತ್ತು' ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದರು.

ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡಬೇಕಾದವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸುವುದು ಅಕ್ಷಮ್ಯ. ಸರ್ಕಾರದಿಂದ ಸಂಬಳ ಪಡೆದು ಅದೇ ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿ,  ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹನಲ್ಲ. ಶಿಕ್ಷಕ ಹರಿಪ್ರಸಾದ್ ಅವರನ್ನು ಅಮಾನತುಗೊಳಿಸಬೇಕು’ ಎಂದು ಹೇಮನಾಥ ಶೆಟ್ಟಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.