ADVERTISEMENT

ಅತಿಥಿ ಶಿಕ್ಷಕರ ಹೆಸರು ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಮೇ 2024, 6:28 IST
Last Updated 30 ಮೇ 2024, 6:28 IST
ಪತ್ರಿಕಾಗೋಷ್ಠಿಯಲ್ಲಿ ಹನುಮಂತಗೌಡ ಆರ್‌.ಕಲ್ಮನಿ ಮಾತನಾಡಿದರು. ಕೃಷ್ಣಾ ರೆಡ್ಡಿ, ಚಂದ್ರಶೇಖರ ಕಾಳನ್ನವರ, ಮನಮೋಹನ್ ಬಲ್ಲಡ್ಕ ಮತ್ತು ರಂಜಿತ್  ಪಾಲ್ಗೊಂಡಿದ್ದರು
ಪತ್ರಿಕಾಗೋಷ್ಠಿಯಲ್ಲಿ ಹನುಮಂತಗೌಡ ಆರ್‌.ಕಲ್ಮನಿ ಮಾತನಾಡಿದರು. ಕೃಷ್ಣಾ ರೆಡ್ಡಿ, ಚಂದ್ರಶೇಖರ ಕಾಳನ್ನವರ, ಮನಮೋಹನ್ ಬಲ್ಲಡ್ಕ ಮತ್ತು ರಂಜಿತ್  ಪಾಲ್ಗೊಂಡಿದ್ದರು   

ಮಂಗಳೂರು: ವಿಧಾನ ಪರಿಷತ್‌ಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳು ಅತಿಥಿ ಶಿಕ್ಷಕರ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಆರ್‌.ಕಲ್ಮನಿ ದೂರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿಥಿ ಶಿಕ್ಷಕರಿಗಾಗಿ ಏನೂ ಮಾಡದ ಕೆಲವರು ಅತಿಥಿ ಶಿಕ್ಷಕರಿಗೆ ವೇತನ ಕೊಡಿಸಿದ್ದು ತಾವು ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ಪಾದಯಾತ್ರೆ ಸೇರಿದಂತೆ ಅನೇಕ ಬಗೆಯಲ್ಲಿ ಅತಿಥಿ ಉಪನ್ಯಾಸಕರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅಂಥ ಸಂದರ್ಭದಲ್ಲಿ ಎಲ್ಲೂ ಕಾಣಿಸಿಕೊಳ್ಳದವರು ಈಗ ಚುನಾವಣೆ ಸುಳ್ಳು ಹೇಳುತ್ತಿದ್ದಾರೆ. ಕೋವಿಡ್‌–19ರ ಸಂದರ್ಭದಲ್ಲಿ ಸರ್ಕಾರ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿದ್ದು ಹೌದು. ಅದು ನಮ್ಮ ಹೋರಾಟದ ಫಲವಾಗಿ ಸಿಕ್ಕಿತ್ತು ಎಂದು ಅವರು ಹೇಳಿದರು.

ADVERTISEMENT

ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಕೃಷ್ಣಾ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮನಮೋಹನ್ ಬಲ್ಲಡ್ಕ, ರಂಜಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.