ADVERTISEMENT

ಸಿಯೋನ್ ಆಶ್ರಮಕ್ಕೆ 1 ಟನ್ ಆಹಾರ ಸಾಮಗ್ರಿ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 14:26 IST
Last Updated 26 ಸೆಪ್ಟೆಂಬರ್ 2024, 14:26 IST
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಅಕ್ಕಿ ಸಹಿತ 1 ಟನ್ ಆಹಾರ ಸಾಮಗ್ರಿ ಹಸ್ತಾಂತರಿಸಲಾಯಿತು
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಅಕ್ಕಿ ಸಹಿತ 1 ಟನ್ ಆಹಾರ ಸಾಮಗ್ರಿ ಹಸ್ತಾಂತರಿಸಲಾಯಿತು   

ಬಂಟ್ವಾಳ: ಇಲ್ಲಿನ ತಾಲ್ಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಸದಸ್ಯರು ಸೇರಿಕೊಂಡು ಬೆಳ್ತಂಗಡಿ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ತೆರಳಿ ಅಕ್ಕಿ ಸಹಿತ ₹ 1ಲಕ್ಷ ಮೌಲ್ಯದ 1 ಟನ್ ಆಹಾರ ಸಾಮಗ್ರಿ ಹಸ್ತಾಂತರಿಸಿದರು.

ಸಿಯೋನ್ ಆಶ್ರಮದ ಆಡಳಿ ನಿರ್ದೇಶಕ ಯು.ಸಿ.ಪೌಲೊಸ್‌ ಮಾತನಾಡಿ, ‘ಸುಮಾರು 387 ಮಂದಿ ಮಾನಸಿಕ ಮತ್ತು ಅಂಗವಿಕಲರು ಸೇರಿದಂತೆ ನಿರಾಶ್ರಿತರಿಗೆ ಸಿಯೋನ್ ಆಶ್ರಮ ಉಚಿತ ಸೇವೆ ನೀಡುತ್ತಿದೆ. ಬಂಟ್ವಾಳದ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ₹ 1 ಲಕ್ಷ ಮೌಲ್ಯದ ಅಕ್ಕಿ ಸಹಿತ ತೊಗರಿಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ, ಮೆಣಸು, ಎಣ್ಣೆ, ಸಾಬೂನು, ಟೂತ್ ಪೇಸ್ಟ್ ಒದಗಿಸಿ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್‌ನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷೆ ಶೃತಿ ಮಾಡ್ತಾ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಪ್ರಮುಖರಾದ ಹರೀಶ ಶೆಟ್ಟಿ ಬಂಟ್ವಾಳ, ವಿಜಯ ಫರ್ನಾಂಡಿಸ್‌, ಸೆಬಾಸ್ಟಿನ್ ಮಿನೇಜಸ್, ಪ್ರವೀಣ್ ಫರ್ನಾಂಡಿಸ್‌ ಉಜಿರೆ, ರೂಪಾ ಆರ್.ಶೆಟ್ಟಿ, ಪ್ರೀತಾ ಸಿಕ್ವೇರ, ಪವನಿ ಹರೀಶ ಶೆಟ್ಟಿ ಭಾಗವಹಿಸಿದ್ದರು. ಯು.ಸಿ.ಪೌಲೊಸ್‌ ದಂಪತಿಯನ್ನು ಸನ್ಮಾನಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.