ADVERTISEMENT

ಮಂಗಳೂರು | ಕಥೋಲಿಕ್‌ ಸಭಾ ಮುಖಂಡನ ಮೇಲೆ ಹಲ್ಲೆ: ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:45 IST
Last Updated 6 ಅಕ್ಟೋಬರ್ 2024, 5:45 IST

ಮಂಗಳೂರು: ಹರೇಕಳ ಸೇತುವೆ ಬಳಿ  ಕಥೋಲಿಕ್‌ ಸಭಾ ಮುಖಂಡ ಅಲ್ವಿನ್‌ ಡಿಸೋಜ ಅವರ ಮೇಲೆ ಮರಳುಗಾರಿಕೆ ನಡೆಸುವವರು ಹಲ್ಲೆ ನಡೆಸಿದ ಕುರಿತು ಸ್ಥಳೀಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪಾವೂರು ಉಳಿಯ ದ್ವೀಪದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸುದ್ದಿ ಮಾಡಲು ಅಲ್ವಿನ್‌ ಡಿಸೋಜ ಅವರು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹಾಗೂ ವಿಡಿಯೊಗ್ರಾಫರ್‌ ಜೊತೆ ಶನಿವಾರ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಬೋಟ್ ಎಂಜಿನನನ್ನು ಒಯ್ಯುತ್ತಿದ್ದ  ವ್ಯಕ್ತಿಯನ್ನು ಉದ್ದೇಶಿಸಿ ಅವರು, ‘ಈ ಎಂಜಿನನ್ನು ಜಂಟಿ ಕಾರ್ಯಪಡೆಯವರು ವಶಕ್ಕೆ ಪಡೆದಿದ್ದರಲ್ಲವೇ’  ಪ್ರಶ್ನಿಸಿದ್ದರು. ಆಗ ಆತ ಅಲ್ಲಿಂದ ಓಡಿದ್ದ. ಈ ವೇಳೆ ಅಲ್ಲಿದ್ದ ಜನರ ಗುಂಪು ಹಾಗೂ ಅಲ್ವಿನ್‌ ಡಿಸೋಜ ನಡುವೆ ಮಾತಿನ ಚಕಮಕಿ ನಡೆದಿತ್ತು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅಲ್ವಿನ್ ಅವರನ್ನು ತಳ್ಳಿದ್ದು, ಅವರ ಭುಜಕ್ಕೆ ಗಾಯವಾಗಿದೆ’ ಎಂದು ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT