ಮುಡಿಪು: ಬಾಳೆಪುಣಿ ಗ್ರಾಮದ ಮುದುಂಗಾರು ಕಟ್ಟೆಯಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಜಾಗೃತಿ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ಶಾರದಾ ಆಯರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ, ಜನ ಶಿಕ್ಷಣ ಟ್ರಸ್ಟ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಡಾ.ಸಹನಾ ಅವರು ಆಯುರ್ವೇದ ಔಷದ ಪದ್ಧತಿ ಮತ್ತು ಸುಸ್ಥಿರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಆಯುರ್ವೇದ ಚಿಕಿತ್ಸೆಯಿಂದ ರೋಗ ಮುಕ್ತರಾದವರ ಮಾತುಕತೆಯಲ್ಲಿ ಸದಾನಂದ, ಲತೀಫ್ ಕೋಡಿಜಾಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಞಿಬಾವು, ಉಪಾಧ್ಯಕ್ಷ ಅಬೂಬಕ್ಕರ್ ಜಲ್ಲಿ, ಅಬ್ದುಲ್ ಖಾದರ್, ಅಜೀಝ್ ಭಾಗವಹಿಸಿದ್ದರು.
ಡಾ.ಶ್ಯಾಮ್ ಪ್ರಸಾದ್, ಡಾ.ಸಹನಾ ಮತ್ತು ವೈದ್ಯ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ನಡೆಸಿ ಔಷಧಿ ನೀಡಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ಪಂಚಾಯಿತಿ ಸದಸ್ಯ ಯಾಕೂಬ್ ವಂದಿಸಿದರು. ಸಹ ಶಕ್ಷಕಿ ಯಶೋದಾ, ಆಶಾಕಾರ್ಯಕರ್ತೆ ಶಾರದಾ, ಅಡುಗೆ ಸಹಾಯಕಿ ಸುನೀತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.