ADVERTISEMENT

ಕೊಲ್ಲಮೊಗ್ರು; ಮತ್ತೆ ಬಿರುಸು ಪಡೆದ ಮಳೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:03 IST
Last Updated 3 ಆಗಸ್ಟ್ 2022, 21:03 IST
ಕೊಲ್ಲ ಮೊಗ್ರದ ಮನೆಯೊಂದರ ಸುತ್ತ ನೀರು ಆವರಿಸಿದ್ದರಿಂದ ಅಜ್ಜಿಯನ್ನು ಎತ್ತಿಕೊಂಡು ತಂದು ರಕ್ಷಣೆ ಮಾಡಲಾಯಿತು.
ಕೊಲ್ಲ ಮೊಗ್ರದ ಮನೆಯೊಂದರ ಸುತ್ತ ನೀರು ಆವರಿಸಿದ್ದರಿಂದ ಅಜ್ಜಿಯನ್ನು ಎತ್ತಿಕೊಂಡು ತಂದು ರಕ್ಷಣೆ ಮಾಡಲಾಯಿತು.   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಧಾರಾಕಾರ ಮಳೆಯಿಂದ ತತ್ತರಿಸಿರುವ ಕೊಲ್ಲಮೊಗ್ರು, ಕಲ್ಮಕಾರು ಭಾಗದಲ್ಲಿ ಬುಧವಾರ ಸಂಜೆ ಮತ್ತೆ ಮಳೆ ಬಿರುಸಾಗಿದೆ.

ಕೊಲ್ಲಮೊಗ್ರು ಪೇಟೆಯ ರಸ್ತೆಗಳು ಮತ್ತೆ ಜಲಾವೃತ ಗೊಂಡಿವೆ. ಹರಿಹರ ಪಲ್ಲತ್ತಡ್ಕ- ಬಾಳುಗೋಡು ಸೇತುವೆ ಮುಳುಗಡೆಯಾಗಿದೆ. ಸುಳ್ಯ ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಬಳಿಕ ಮಳೆ ಬಿರುಸು ಪಡೆಯಿತು. ಬುಧವಾರ ಬೆಳಗಿನ ವೇಳೆ ಮಳೆ ಕೊಂಚ ತಗ್ಗಿತ್ತು.

ಮಳೆಯ ಹಿನ್ನೆಲೆಯಲ್ಲಿ ಸುಳ್ಯ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ಆ.4ರಂದು ರಜೆ ಘೋಷಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.