ADVERTISEMENT

ದಕ್ಷಿಣ ಕನ್ನಡ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 5:12 IST
Last Updated 7 ಜುಲೈ 2024, 5:12 IST
ಮಳೆ
ಮಳೆ   

ಮಂಗಳೂರು: ಎರಡು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಶನಿವಾರ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ಶುಕ್ರವಾರ ರಾತ್ರಿ ಶುರುವಾಗಿದ್ದ ಮಳೆ ಬೆಳಿಗ್ಗೆವರೆಗೂ ಮುಂದುವರಿದಿತ್ತು. ಒಂದೆರಡು ಬಾರಿ ಬಿಸಿಲು ಆವರಿಸಿದ್ದು ಬಿಟ್ಟರೆ ದಿನವೀಡೀ ಮಳೆ ಸುರಿಯಿತು.

ಶನಿವಾರ ಬೆಳಿಗ್ಗೆ 8.30ರವರೆಗ ಜಿಲ್ಲೆಯಾದ್ಯಂತ ಸರಾಸರಿ 5.06 ಸೆಂ.ಮೀ. ಮಳೆಯಾಗಿದೆ. ಮೂಲ್ಕಿ (ಸರಾಸರಿ 8.46 ಸೆಂ.ಮೀ), ಬೆಳ್ತಂಗಡಿ (ಸರಾಸರಿ 79.8 ಸೆಂ.ಮೀ) ಹಾಗೂ ಮೂಡುಬಿದಿರೆ (ಸರಾಸರಿ 7.94 ಸೆಂ.ಮೀ) ತಾಲ್ಲೂಕುಗಳಲ್ಲಿ ಮಳೆಯ ತೀವ್ರತೆ ಜಾ‌ಸ್ತಿ ಇತ್ತು. ಮೂಲ್ಕಿ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಮನೆಯೊಂದು ಭಾಗಶಃ ಹಾನಿಗೊಳಗಾಗಿದೆ. ಭಾರಿ ಮಳೆಯಾಗುವ ಮುನ್ಸೂಚನೆ ಇದ್ದ ಕಾರಣ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT