ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂತ ನೆನ್ನೆ ರಾತ್ರಿಯಿಂದ ವ್ಯಾಪಕ ಮಳೆ ಆಗುತ್ತಿತ್ತು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ರಸ್ತೆ ಸಂಪರ್ಕ ಕಡಿತ:
ಭಾರಿ ಮಳೆಯಿಂದ ಈ ಎರಡೂ ತಾಲ್ಲೂಕುಗಳಲ್ಲಿ ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನರಿಗೆ ಸಂಚಾರಕ್ಕೆ ತೊಂದರೆಯಾಗಿದ್ದು ಇರುತ್ತದೆ. ರಸ್ತೆಗಳ ಮೇಲೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ.
ಮಂಗಳವಾರ ಬೆಳಿಗ್ಗೆ ಮಳೆ ಪ್ರಮಾಣ ಕಡಿಮೆಯಾಗಿದ್ದು ರಸ್ತೆ ಸಂಪರ್ಕಗಳು ಸಹ ಸ್ಥಿತಿಗೆ ಬಂದಿರುತ್ತದೆ. ಆದರೆ ಏನೆಕಲ್ ಭಾಗದಲ್ಲಿ ನಿನ್ನಯಿಂದ ಮಳೆ ಪ್ರಮಾಣ ಜಾಸ್ತಿ ಇದ್ದು ರಸ್ತೆ ಸಂಪರ್ಕ ಈಗಲೂ ಕಡಿತವಾಗಿದೆ ಎಂದು ತಿಳಿದು ಬಂದಿರುತ್ತದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತು ಊರಿನ ಸುತ್ತಮುತ್ತ ವ್ಯಾಪಕ ಮಳೆ ಆಗಿರುವುದರಿಂದ ದೇವಸ್ಥಾನದ ಒಳಗೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ .
ನಿನ್ನೆ ರಾತ್ರಿಯಿಂದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸುಬ್ರಮಣ್ಯದಲ್ಲೇ ಉಳಿದುಕೊಂಡು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ನೆರೆಯ ಪರಿಸ್ಥಿತಿಯನ್ನು ನಿಯಂತ್ರಿಸವಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಇತರ ಸಿಬ್ಬಂದಿಗಳ ಜೊತೆಗೆ ತುರ್ತು ಪರಿಹಾರ ಕ್ರಮವನ್ನು ಕೈಗೊಂಡಿರುತ್ತಾರೆ.
ಎನ್‌ಡಿಆರ್ ಎಫ್ ತಂಡ ಈಗಾಗಲೇ ಸುಬ್ರಹ್ಮಣ್ಯದಲ್ಲಿದ್ದು ತುರ್ತು ಪರಿಹಾರ ಕಾರ್ಯವನ್ನು ನಿರ್ವಹಿಸುತ್ತಿದೆ ಹಾಗೆ ಎಸ್ ಡಿ ಆರ್. ಎಫ್ ತಂಡ ಕೊಲ್ಲಮೊಗರು ಭಾಗಕ್ಕೆ ಭೇಟಿ ನೀಡಿದೆ. ನಂತರ ಸುಬ್ರಹ್ಮಣ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಳುಹಿಸಲಾಗಿದೆ. ಸುಳ್ಯ ಮತ್ತು ಪುತ್ತೂರಿನ ಅಗ್ನಿಶಾಮಕ ತಂಡಗಳು ರಾತ್ರಿಯಿಂದ ಕೊಲ್ಲಮೊಗರು ಹಾಗೂ ಸುಳ್ಯ ಸುಬ್ರಹ್ಮಣ್ಯದ ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯವನ್ನ ನಿರ್ವಹಿಸುತ್ತಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಞಮೂರ್ತಿ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.