ADVERTISEMENT

ದಕ್ಷಿಣ ಕನ್ನಡ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 4:41 IST
Last Updated 26 ಜೂನ್ 2024, 4:41 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೆ ಭಾರಿ ಮಳೆಯಾಗಿದೆ.

ಮಂಗಳವಾರ ರಾತ್ರಿ 9 ಗಂಟೆ ಶುರುವಾಗಿದ್ದ ಮಳೆ ಬುಧವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಸುರಿದಿತ್ತು. ಸುಮಾರು ಅರ್ಧ ಗಂಟೆ ಬಿಡುವು ಪಡೆದ ಮಳೆ ಮತ್ತೆ ಮುಂದುವರಿದಿದೆ.

ಬುಧವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 18.8 ಸೆಂ.ಮೀ, ಇರಾದಲ್ಲಿ 15.4, ಬಾಳ್ತಿಲದಲ್ಲಿ 14.35, ಬಾಳೆಪುಣಿಯಲ್ಲಿ 14.15, ಗೋಳ್ತಮಜಲುವಿನಲ್ಲಿ 12.30, ವಿಟ್ಲಮಡ್ನೂರುವಿನಲ್ಲಿ11.75, ಮಂಗಳೂರು ತಾಲ್ಲೂಕಿನ ಮಳವೂರಿನಲ್ಲಿ 12.95 ಉಳ್ಳಾಲ ತಾಲ್ಲೂಕಿನ ಕೋಟೆಕಾರಿನಲ್ಲಿ 12.35, ಬೋಳಿಯಾರ್ ನಲ್ಲಿ 12.25 ಹಾಗೂ ಕಿನ್ಯದಲ್ಲಿ, 11.15 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.