ಕಾಸರಗೋಡು: ಮಹಿಳೆಯೊಬ್ಬರನ್ನು ಬಳಸಿ ಹನಿಟ್ರ್ಯಾಪ್ ಮಾಡಿದ ಆರೋಪದಲ್ಲಿ ದಿಲ್ಷಾದ್, ಸಿದ್ದೀಕ್, ಲುಬ್ನಾ, ಫೈಝಲ್ ಸಹಿತ 7 ಮಂದಿ ಆರೋಪಿಗಳ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗಳೂರಿನ ವಸತಿ ಗೃಹವೊಂದರಲ್ಲಿ ಆರೋಪಿ ಲುಬ್ನಾ ಎಂಬಾಕೆಯ ಜೊತೆ ತನ್ನ ಫೋಟೊ ತೆಗೆದು, ಆರೋಪಿಗಳು ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿರುವುದಾಗಿ ಮಾಂಗಾಡ್ ನಿವಾಸಿ 59 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.