ADVERTISEMENT

ಪಕ್ಷಿಕೆರೆ: ಪತ್ನಿ, ಮಗು ಕೊಂದು ಹೋಟೆಲ್‌ ಮಾಲೀಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:30 IST
Last Updated 10 ನವೆಂಬರ್ 2024, 0:30 IST
ಕಾರ್ತಿಕ್ ಭಟ್‌
ಕಾರ್ತಿಕ್ ಭಟ್‌   

ಮೂಲ್ಕಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಷಿಕೆರೆಯ ಹೋಟೆಲ್‌ ಮಾಲೀಕರೊಬ್ಬರು ಪತ್ನಿ ಹಾಗೂ ಮಗು ಕೊಂದು ಹಳೆಯಂಗಡಿ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದೆ. ಅವರ ಪತ್ನಿ, ಶಿವಮೊಗ್ಗದ ಪ್ರಿಯಾಂಕಾ (28), ಪುತ್ರ ಹೃದಯ (4) ಅವರಿಗೆ ವಿಷ ನೀಡಿ ಹತ್ಯೆ ಮಾಡಿ, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡೆತ್‌ನೋಟ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ತಿಕ್ ಭಟ್ ಅವರು ಪೋಷಕರೊಂದಿಗೆ ಪಕ್ಷಿಕೆರೆ ಮುಖ್ಯ ಜಂಕ್ಷನ್‌ನಲ್ಲಿ ಹೋಟೆಲ್‌  ನಡೆಸುತ್ತಿದ್ದರು. ಅಲ್ಲೇ ಸಮೀಪದಲ್ಲಿ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.