ADVERTISEMENT

ಮನೆ ಕುಸಿದು ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 16:02 IST
Last Updated 11 ಜುಲೈ 2018, 16:02 IST
ಕಾಲ್ತೋಡಿನ ಬೋಳಂಬಳ್ಳಿಯಲ್ಲಿ ಬುಧವಾರ ಕುಸಿದ ಮನೆ (ಬೈಂದೂರು ಚಿತ್ರ)
ಕಾಲ್ತೋಡಿನ ಬೋಳಂಬಳ್ಳಿಯಲ್ಲಿ ಬುಧವಾರ ಕುಸಿದ ಮನೆ (ಬೈಂದೂರು ಚಿತ್ರ)   

ಬೈಂದೂರು: ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪಿಯ ಬೊಳಂಬಳ್ಳಿಯಲ್ಲಿ ಬುಧವಾರ ಸುರಿದ ಗಾಳಿ ಮಳೆಗೆ ದೇವರಾಜ ಜೈನ್ ಎಂಬುವರ ಮಹಡಿ ಮನೆ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ನಷ್ಟ ಉಂಟಾಗಿದೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ದೊಡ್ಡ ಶಬ್ದ ಕೇಳಿ ಮನೆಯಲ್ಲಿದ್ದ ಮಗ ವಜ್ರಕುಮಾರ್ ಜೈನ್, ಮಡದಿ ಹಾಗೂ ಮೂರು ತಿಂಗಳ ಮಗು ಎತ್ತಿಕೊಂಡು ಹೊರಗೆ ಓಡಿ ಬಂದ ಕಾರಣದಿಂದ ಯಾವುದೇ ರೀತಿ ಪ್ರಾಣಾಪಾಯವಾಗಲಿಲ್ಲ. ಆದರೆ ಮಹಡಿ ಮೇಲಿದ್ದ ಗೋದ್ರೆಜ್ ಕಪಾಟು, ಮಂಚ, ಬಟ್ಟೆ ಬರೆ ಸೇರಿದಂತೆ ಲಕ್ಷಾಂತರ ಮೌಲ್ಯದ ಸ್ವತ್ತಿಗೆ ಹಾನಿ ಆಗಿದೆ ಎಂದು ದೇವರಾಜ್‌ ಜೈನ್ ಹೇಳಿದರು.

ಈಗ ನಿರ್ಮಾಣ ಹಂತದ ಮನೆಯಲ್ಲಿ ತಾತ್ಕಾಲಿಕ ವಾಸ್ತವ್ಯ ಮಾಡಿದ್ದಾರೆ. ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ನೆರೆ ಹೊರೆಯವರು ಕೂಡಾ ಇವರ ನೆರವಿಗೆ ದೌಡಾಯಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ನಷ್ಟ ಅಂದಾಜಿಸಿ, ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.