ADVERTISEMENT

ಸಕಾರಾತ್ಮಕ ಮೌಲ್ಯವನ್ನು ಗುರುತಿಸಿ: ಓಸ್ವಾಲ್ಡ್ ಮೊಂತೆರೊ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:42 IST
Last Updated 20 ನವೆಂಬರ್ 2024, 5:42 IST
ಕಿನ್ನಿಗೋಳಿ ಬಳಿಯ ದಾಮಸ್ಕಟ್ಟೆ ಕಿರೆಂ ಚರ್ಚ್‌ನಲ್ಲಿ ಅಂತರರಾಷ್ಟ್ರೀಯ ಪುರುಷರ ದಿನ ಆಚರಿಸಲಾಯಿತು
ಕಿನ್ನಿಗೋಳಿ ಬಳಿಯ ದಾಮಸ್ಕಟ್ಟೆ ಕಿರೆಂ ಚರ್ಚ್‌ನಲ್ಲಿ ಅಂತರರಾಷ್ಟ್ರೀಯ ಪುರುಷರ ದಿನ ಆಚರಿಸಲಾಯಿತು   

ಮೂಲ್ಕಿ: ಪುರುಷರು ಸಮಾಜಕ್ಕಾಗಿ, ಸಮುದಾಯಕ್ಕಾಗಿ, ಕುಟುಂಬಕ್ಕಾಗಿ ನಿರಂತರವಾಗಿ ಹಲವು ತ್ಯಾಗಗಳನ್ನು ಮಾಡುತ್ತಾರೆ. ಅವರ ಸಕಾರಾತ್ಮಕ ಮೌಲ್ಯಗಳನ್ನು ಸಮಾಜವು ಗುರುತಿಸಿ ಅವರನ್ನು ಗೌರವಿಸಬೇಕು’ ಎಂದು ಕೆಥೋಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕ ಓಸ್ವಾಲ್ಡ್ ಮೊಂತೆರೊ ಹೇಳಿದರು.

ಕಿನ್ನಿಗೋಳಿ ಬಳಿಯ ದಾಮಸ್ಕಟ್ಟೆ ಚರ್ಚ್‌ನಲ್ಲಿ ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ವತಿಯಿಂದ ನಡೆದ ಅಂತರರಾಷ್ಟ್ರೀಯ ಪುರುಷರ ದಿನ  ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಸಿ. ಸೆವ್ರಿನ್ ಮಿನೇಜಸ್ ಮಾತನಾಡಿದರು. ಏಳಿಂಜೆ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ಡಿಕೊಸ್ತಾ ಅವರನ್ನು ಸನ್ಮಾನಿಸಲಾಯಿತು. ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಅಧ್ಯಕ್ಷೆ ಮೆಲ್ರಿಡ ಜೋನ್ ರೊಡ್ರಿಗಸ್, ಕಾರ್ಯದರ್ಶಿ ಶಾಂತಿ ಸಲ್ಡಾನಾ, ಜೇಮ್ಸ್ ಲೋಬೊ, ಫ್ರಾನ್ಸಿಸ್ ಸೆರಾವೊ, ಪ್ರಮೀಳಾ ತಾವ್ರೊ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.