ADVERTISEMENT

ಮುಡಿಪು– ರಸ್ತೆಯಲ್ಲೇ ಇಫ್ತಾರ್‌ ಕೂಟ: ಸ್ಪಷ್ಟನೆ ಕೇಳಿದ ಸಹಾಯಕ ಚುನಾವಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 20:26 IST
Last Updated 1 ಏಪ್ರಿಲ್ 2024, 20:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ‘ಆಟೊ ರಾಜಾಕನ್ಮಾರ್’ ಜಿಲ್ಲಾ ಆಟೊ ಚಾಲಕರ ಸಂಘಟನೆಯು ಉಳ್ಳಾಲ ತಾಲ್ಲೂಕಿನ ಮುಡಿಪು ಜಂಕ್ಷನ್‌ನಲ್ಲಿ ಶುಕ್ರವಾರ ಇಫ್ತಾರ್ ಕೂಟವನ್ನು ರಸ್ತೆಯಲ್ಲೇ ಹಮ್ಮಿಕೊಂಡಿತ್ತು ಎಂಬ ದೂರಿನ ಕುರಿತು ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಹರ್ಷವರ್ಧನ್ ಎಸ್.ಜೆ. ಸ್ಪಷ್ಟನೆ ಕೇಳಿದ್ದಾರೆ.

‘ಸಂಘಟಕರು ಅನುಮತಿ ಪಡೆದೇ ಇಫ್ತಾರ್ ಕೂಟ ಆಯೋಜಿಸಿದ್ದರು. ಆದರೆ, ರಸ್ತೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು ಎಂದು ದೂರು ಬಂದಿದ್ದರಿಂದ ಸಂಘಟಕರಿಂದ ಎಆರ್‌ಒ ಸ್ಪಷ್ಟನೆ ಕೇಳಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಇಫ್ತಾರ್‌ ಕೂಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ‘ಈ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿ ಮುಡಿಪು ವಲಯದ ಹಿಂದೂ ಜಾಗರಣ ವೇದಿಕೆಯು ಎಆರ್‌ಒಗೆ ದೂರು ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.