ADVERTISEMENT

ಭಾರತೀಯ ಸಂಸ್ಕೃತಿ ಶ್ರೇಷ್ಠ: ಎಡನೀರು ಸಚ್ಚಿದಾನಂದ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಮೇ 2023, 12:29 IST
Last Updated 23 ಮೇ 2023, 12:29 IST

ಬದಿಯಡ್ಕ: 'ಭಾರತೀಯ ಸಂಸ್ಕೃತಿ ಸಂಸ್ಕೃತಿಯು ಶ್ರೇಷ್ಠವಾಗಿದೆ. ಈ ಸಂಸ್ಕೃತಿಗೆ ಕೊಡುಗೆ ನೀಡುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಸ್ತುತ್ಯರ್ಹ’ ಎಂದು ಎಡನೀರು ಸಚ್ಚಿದಾನಂದ ಭಾರತಿ  ಸ್ವಾಮೀಜಿ ಹೇಳಿದರು.

ಎಡನೀರು ಮಠದಲ್ಲಿ ನಡೆದ ರಂಗಚಿನ್ನಾರಿ ಸಂಸ್ಥೆಯ 17ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರತಾಪಸಿಂಹ ನಾಯಕ್‌ ಪ್ರಶಸ್ತಿ ಪ್ರದಾನ ಮಾಡಿದರು. ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಭಾಗವಹಿಸಿದ್ದರು. ಮಾಧವ ಹೇರಳ, ಡಾ. ರೋಹಿಣಿ ಅಯ್ಯರ್, ಗಿರಿಜಾ ಚಂದ್ರನ್, ರಾಜೇಂದ್ರ ಕಲ್ಲೂರಾಯ, ಗಣೇಶ್ ಕುಂಬಳೆ, ಡಾ. ರಮಾ ಅಯ್ಯರ್, ವಿದ್ವಾನ್ ಸುಧೀರ್ ರಾವ್ ಇದ್ದರು. ಡಾ. ನಾ.ದಾ. ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪೂಕಳ ಲಕ್ಷ್ಮೀನಾರಾಯಣ ಭಟ್‌, ಜಯಲಕ್ಷ್ಮಿ ಕಾರಂತ, ಸುಜಿತ್ ಕುಮಾರ್ ಹಾಗೂ ಬಿ ಮೇಧಾ ನಾಯಕ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಕೊಡವೂರಿನ ನೃತ್ಯ ಸಿಂಚನ ಹಾಗೂ ಖ್ಯಾತ ಗಾಯಕ ಕಿಶೋರ್‌ ಪೆರ್ಲ ಅವರಿಂದ ಭಾವಗಂಧ ಕಾರ್ಯಕ್ರಮ ನಡೆಯಿತು. ಚಿನ್ನಾ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.