ADVERTISEMENT

ಬೈಕಂಪಾಡಿ: ಕೈಗಾರಿಕಾ ತ್ಯಾಜ್ಯ ನೀರು ಫಲ್ಗುಣಿ ನದಿಗೆ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:14 IST
Last Updated 20 ಜೂನ್ 2024, 7:14 IST
<div class="paragraphs"><p> ಫಲ್ಗುಣಿ ನದಿ </p></div>

ಫಲ್ಗುಣಿ ನದಿ

   

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೈಗಾರಿಕೆಯೊಂದರ ಬಳಿ ವಾರದಿಂದ ಈಚೆಗೆ ಕೈಗಾರಿಕಾ ತ್ಯಾಜ್ಯ ನೀರು ಹಳ್ಳಗಳಲ್ಲಿ ಹರಿದು ಪಲ್ಗುಣಿ ನದಿಯನ್ನು ಸೇರುತ್ತಿದೆ ಎಂದು ಸ್ಥಳೀಯ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.

‘ಇಲ್ಲಿ ಕೈಗಾರಿಕೆಯೊಂದರ ಸಮೀಪದ ಹಳ್ಳದಲ್ಲಿ ಕಪ್ಪನೆಯ ನೀರು ಹರಿಯುತ್ತಿದೆ. ವರ್ಷದ ಹಿಂದೆಯೂ ಇಲ್ಲಿ ಅದೇ ಕೈಗಾರಿಕಾ ಘಟಕದಿಂದ ತ್ಯಾಜ್ಯ ನೀರು ಹೊರಗೆ ಹರಿದಿತ್ತು’ ಎಂದು ಸಮಿತಿಯ ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ.

ADVERTISEMENT

‘ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹಳ್ಳಗಳಲ್ಲಿ ಕಲುಷಿತ ನೀರು ಹರಿಯುತ್ತಿರುವ ಬಗ್ಗೆ ದೂರು ಬಂದಿದ್ದು, ನಮ್ಮ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಅದನ್ನು ವಿಶ್ಲೇಷಣೆಗೆ ಒಳಪಡಿಸಿದ ಬಳಿಕವಷ್ಟೇ ಅದು ಕೈಗಾರಿಕಾ ತ್ಯಾಜ್ಯನೀರು ಹೌದೋ ಅಲ್ಲವೋ ಎಂಬುದು ಗೊತ್ತಾಗುತ್ತದೆ’ ಎಂದು ಕೆಎಸ್‌ಪಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.