ಮಂಗಳೂರು: ಭಾರತೀಯ ನೌಕಾಪಡೆಯ ಸಮುದ್ರ ಸೇತು–2 ಭಾಗವಾಗಿ ಸೋಮವಾರ ಕುವೈತ್‌ನಿಂದ 40 ಟನ್ ಆಮ್ಲಜನಕವನ್ನು ಹೊತ್ತ ಐಎನ್‌ಎಸ್ ಕೋಲ್ಕತ್ತ ಹಡಗು ಇಲ್ಲಿನ ನವ ಮಂಗಳೂರು ಬಂದರಿಗೆ ಬಂದಿದೆ.
ಭಾರತದೊಂದಿಗಿನ ಭಾಂದವ್ಯದ ದ್ಯೋತಕವಾಗಿ ಕುವೈತ್ ಸರ್ಕಾರ ಎರಡು ಕಂಟೈನರ್‌ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್‌ಗಳು, ಆಕ್ಸಿಜನ್ ಕಾಂಸ್ಟ್ರೇಟರ್ ಪೂರೈಕೆ ಮಾಡಿದೆ.
ಒಂದು ಹಡಗು ಸೋಮವಾರ ಬಂದಿದ್ದು, ಮಂಗಳವಾರ ಇನ್ನೂ ಎರಡು ಹಡಗುಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.