ADVERTISEMENT

ಬೆಳ್ತಂಗಡಿ: ಬೆದರಿಸಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ - ದೂರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 5:39 IST
Last Updated 2 ಏಪ್ರಿಲ್ 2023, 5:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳ್ತಂಗಡಿ : ಪರಿಚಯದವರೇ ಆದ ಇಬ್ಬರು ಸೇರಿಕೊಂಡು ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಬೆದರಿಸಿ ‘ಗೂಗಲ್ ಪೇ’ ಮೂಲಕ ಹಣ ವರ್ಗಾಯಿಸಿಕೊಂಡಿದ್ದಲ್ಲದೇ, ಮನೆಯಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕದ್ದೊಯ್ದ ಘಟನೆ ತಾಲ್ಲೂಕಿನ ಪಡಂಗಡಿಯಲ್ಲಿ ನಡೆದಿದೆ.

‘ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ರಿಯಾಜ್ ಮತ್ತು ಫೈಜಲ್ ಈ ಕೃತ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಪಡಂಗಡಿ ಗ್ರಾಮದ ಜಾನೆ ಬೈಲು ಬಳಿಯ ನಿವಾಸಿ ಜುವಾಮ್ ಗೋವಿಯಸ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. .

‘ಮನೆಯ ಸಮೀಪದ ರಬ್ಬರ್ ಶೆಡ್ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಹಲ್ಲೆ ನಡೆಸಿದರು. ಆಯತಪ್ಪಿ ನಾನು ನೆಲಕ್ಕೆ ಬಿದ್ದಾಗ ಕುತ್ತಿಗೆ ಬಿಗಿದು ಬೆದರಿಸಿ ಗೂಗಲ್ ಪಿನ್ ಕೇಳಿ ಅವರ ಮೊಬೈಲ್ ನಿಂದ ₹ 82 ಸಾವಿರವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಮಡರು. ನನ್ನ ಮೊಬೈಲ್ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದರು ಎಂದು ದೂರಿನಲ್ಲಿ ಗೋವಿಯಸ್ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.