ADVERTISEMENT

ಉಪ್ಪಿನಂಗಡಿಯಲ್ಲಿ ಹಲಸು ಹಬ್ಬ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:21 IST
Last Updated 7 ಜುಲೈ 2024, 16:21 IST
ಉಪ್ಪಿನಂಗಡಿಯಲ್ಲಿ ಹಲಸು ಮೇಳ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು
ಉಪ್ಪಿನಂಗಡಿಯಲ್ಲಿ ಹಲಸು ಮೇಳ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು   

ಉಪ್ಪಿನಂಗಡಿ: ‘ಬಹಳಷ್ಟು ಮಂದಿಯ ಮನೆಯಲ್ಲಿ ಹಲಸು ಇದೆ. ಆದರೆ ಅದಕ್ಕೆ ಮಾರುಕಟ್ಟೆ ಮೌಲ್ಯ ದೊರೆತಾಗ ಮಾತ್ರ ರೈತರಿಗೆ ಪ್ರಯೋಜನ ಸಿಗಲು ಸಾಧ್’ ಎಂದು ದ.ಕ. ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ  ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಶನಿವಾರ ಜೇಸಿಐ , ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಪ್ಪಿನಂಗಡಿಯಲ್ಲಿ  ನಡೆದ  ‘ಹಲಸು ಹಬ್ಬ-24’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ‘ಈಗ ಹಲಸಿಗೆ ಮಾರುಕಟ್ಟೆ ಮೌಲ್ಯ ಬಂದಿದೆ. ಕ್ಯಾನ್ಸರ್‌ನಂತ ಮಾರಕ ರೋಗಗಳಿಗೂ ಹಲಸು ಔಷಧಿಯಾಗಿದೆ. ಇಂತಹ ಮೇಳಗಳು ಇನ್ನಷ್ಟು ನಡೆದಾಗ ಹಲಸಿಗೆ ಉತ್ತಮ ಮಾರುಕಟ್ಟೆ ದೊರೆಯಲು ಸಾಧ್ಯ’ ಎಂದರು.

ADVERTISEMENT

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ, ಜೇಸಿಐನ ಪುರಂದರ ರೈ ಮಿತ್ರಂಪಾಡಿ ಮಾತನಾಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ-ಮಹಾಕಾಳಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಮಳಿಗೆಗಳಿಗೆ ಚಾಲನೆ ನೀಡಿದರು.

ಕೃಷಿಕರಾದ ನೇಮಣ್ಣ ಪೂಜಾರಿ ಪಾಲೇರಿ, ಸಿದ್ದಪ್ಪ ನಾಯ್ಕ್, ಧರ್ನಪ್ಪ ಗೌಡ ಅಂಡಿಲ, ಕೆ.ಪಿ. ಜಯರಾಮ ಶೆಟ್ಟಿ, ಪ್ರತಾಪ್ ಪೆರಿಯಡ್ಕ, ಪದ್ಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಶ್ಮಿ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರಾಗ್ಸ್, ರಘು ಶೆಟ್ಟಿ, ಸುಮಿತ್ರಾ, ಭಾರತಿ, ಲವೀನಾ ಪಿಂಟೊ,  ಸುರೇಶ್, ರಾಧಾಕೃಷ್ಣ ಬೊಳ್ಳಾವು ಇದ್ದರು. ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಶೇಖರ ಗೌಂಡತ್ತಿಗೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.