ADVERTISEMENT

ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದ ನೆಹರೂ: ಎಂ.ಎ ಗೂಫೂರ್

​ಪ್ರಜಾವಾಣಿ ವಾರ್ತೆ
Published 27 ಮೇ 2024, 13:35 IST
Last Updated 27 ಮೇ 2024, 13:35 IST
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 60ನೇ ಪುಣ್ಯತಿಥಿ ಆಚರಿಸಲಾಯಿತು
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 60ನೇ ಪುಣ್ಯತಿಥಿ ಆಚರಿಸಲಾಯಿತು   

ಮಂಗಳೂರು: ಜವಾಹರಲಾಲ್ ನೆಹರೂ ಅವರು 17 ವರ್ಷಗಳ ಕಾಲ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಫಲವಾಗಿ ಭಾರತ ಶೈಕ್ಷಣಿಕ, ತಾಂತ್ರಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಎ ಗೂಫೂರ್ ಹೇಳಿದರು.

ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 60ನೇ ಪುಣ್ಯತಿಥಿ ಅಂಗವಾಗಿ ಸೋಮವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತವನ್ನು ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದ್ದು ನೆಹರೂ. ದೇಶದ ಇಂದಿನ ಪ್ರಗತಿಗೆ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಪಂಚವಾರ್ಷಿಕ ಯೋಜನೆ, ಕೈಗಾರಿಕೆ, ಕೃಷಿ, ನೀರಾವರಿ, ವಿಜ್ಞಾನ-ತಂತ್ರಜ್ಞಾನ, ವಿದೇಶಾಂಗ ನೀತಿ ಜಾರಿಗೆ ತಂದು ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ಸ್ಮರಿಸಿದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ಪ್ರಮುಖರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಅಶ್ರಫ್.ಕೆ, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ಶಾಹುಲ್ ಹಮೀದ್, ಚೇತನ್ ಬೆಂಗ್ರೆ, ಟಿ.ಹೊನ್ನಯ್ಯ, ಚಂದ್ರಹಾಸ ಕರ್ಕೇರ, ಮೊಹಮ್ಮದ್ ಕುಂಜತ್ತಬೈಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್, ಕೆ.ಅಪ್ಪಿ, ವಿಕಾಸ್ ಶೆಟ್ಟಿ, ಸಬಿತಾ ಮಿಸ್ಕಿತ್, ಮಂಜುಳಾ ನಾಯಕ್, ಶಾಂತಲ ಗಟ್ಟಿ, ದಿನೇಶ್ ರಾವ್, ಉದಯ್ ಕುಂದರ್, ಜಯರಾಂ ಕಾರಂದೂರು, ವೋಸ್ ವಾಲ್ಡ್, ರಿತೇಶ್ ಅಂಚನ್ ಿದ್ದರು.

ಮೂಡ ಅಧ್ಯಕ್ಷ ಸದಾಶಿವ್ ಉಳ್ಳಾಲ್ ಸ್ವಾಗತಿಸಿದರು. ಶಾಲೆಟ್ ಪಿಂಟೊ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.