ಬೆಳ್ತಂಗಡಿ: ‘ಜೇಸಿಐಯಂಥ ಸಂಸ್ಥೆಯೊಂದು ಜವಾಬ್ದಾರಿಯುತ ವ್ಯಕ್ತಿಯ ಕೈಯಲ್ಲಿ ಬಂದಾಗ ಸಂಸ್ಥೆ ಮತ್ತು ಸಮಾಜ ಬೆಳೆಯುವುದು’ ಎಂದು ಲಯನ್ಸ್ ವಲಯ 3ರ ವಲಯಾಧ್ಯಕ್ಷ ಧರಣೇಂದ್ರ ಜೈನ್ ಹೇಳಿದರು.
ಬೆಳ್ತಂಗಡಿ ಮಂಜುಶ್ರೀ ಜೇಸಿ ಭವನದಲ್ಲಿ ಜೇಸಿಐಯ ಪ್ರಶಾಂತ್ ಲಾಯಿಲ ಮತ್ತು ತಂಡದ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜೇಸಿ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರು, ಉಪಾಧ್ಯಕ್ಷ ರಾಯನ್ ಉದಯ ಕ್ರಾಸ್ತ ಮಾತನಾಡಿದರು. ನಿರ್ಗಮನ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ನೂತನ ಅಧ್ಯಕ್ಷ ಪ್ರಶಾಂತ ಲಾಯಿಲ ಅವರಿಗೆ, ನಿರ್ಗಮನ ಕಾರ್ಯದರ್ಶಿ ವಿಶಾಲ್ ಅಗಸ್ಟಿನ್ ನೂತನ ಕಾರ್ಯದರ್ಶಿ ಗಣೇಶ್ ಶಿರ್ಲಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕೋಟ್ಯಾನ್, ನಿರ್ದೇಶಕ ಚಿದಾನಂದ ಇಡ್ಯಾ , ಎಪಿಎಂಸಿ ಅಧ್ಯಕ್ಷ ಕೇಶವ ಪಿ ಬೆಳಾಲು, ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್ ಡಿ , ನಿರ್ದೇಶಕ ಚಿದಾನಂದ ಇಡ್ಯಾ, ಪೂರ್ವಾಧ್ಯಕ್ಷ ವಸಂತ ಶೆಟ್ಟಿ ಶ್ರದ್ದಾ, ಜೇಸಿರೆಟ್ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ನೂತನ ಜೇಜೆಸಿ ಅಧ್ಯಕ್ಷ ವಿನಾಯಕ ಪ್ರಸಾದ್, ನಿಕಟಪೂರ್ವ ಜೇಜೆಸಿ ಅಧ್ಯಕ್ಷ ಸುಹಾಸ್ ಶೆಟ್ಟಿ ಇದ್ದರು. ಉಪಾಧ್ಯಕ್ಷ ಪ್ರಸಾದ್ ಬಿ.ಎಸ್, ರಂಜಿತ್ ಎಚ್.ಡಿ ಹಾಗೂ ಜಾಲತಾಣ ವಿಭಾಗದ ನಿರ್ದೇಶಕ ಆಶ್ರಯ್ ಅಜ್ರಿ , ಸದಸ್ಯ ಶಂಕರ್ ರಾವ್, ತಂಡದ ಉಪಾಧ್ಯಕ್ಷ ಪ್ರಸಾದ್ ಬಿ.ಎಸ್, ಸ್ವರೂಪ್ ಶೇಖರ್, ದಾಮೋದರ್, ವಿಶಾಲ್ ಅಗಸ್ಟಿನ್, ಕೋಶಾಧಿಕಾರಿ– ಅಭಿನಂದನ್ ಹರೀಶ್, ಜೊತೆ ಕಾರ್ಯದರ್ಶಿ– ವಿಜಯನಿಡಿಗಲ್, ಹೇಮಾವತಿ ಕೆ, ಶಂಕರ್ ರಾವ್, ಪ್ರಸಾಂತ್ ಎಂ,ಸುರೇಶ್ ಗೌಡ, ಪ್ರೀತಮ್ ಶೆಟ್ಟಿ, ಅಕ್ಷತಾ, ಗುರುರಾಜ್, ರೋಹಿತಾಕ್ಷ, ಗಣೇಶ್ ಚಾರ್ಮಾಡಿ, ಸತೀಶ್ ಸುವರ್ಣ, ಆಶ್ರಯ್ ಅಜ್ರಿ, ಜಿತೇಶ್, ಸ್ಮಿತೇಶ್, ಶೀತಲ್ ಜೈನ್, ಸುಶೀಲ್ ಎಸ್., ಶೀತಲ್ ಜೈನ್ , ಕಾರ್ಯದರ್ಶಿ ಗಣೇಶ್ ಶಿರ್ಲಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.