ADVERTISEMENT

ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:07 IST
Last Updated 26 ಏಪ್ರಿಲ್ 2024, 4:07 IST
ಪ್ರೀತಂ
ಪ್ರೀತಂ   

ಮೂಡುಬಿದಿರೆ: ಜೆಇಇ 2ನೇ ಹಂತದ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಕಾಲೇಜಿನ ಎಚ್.ಆರ್.ರಜತ್ 99.6655363 ಪರ್ಸಂಟೈಲ್ ಪಡೆದರೆ, ಪ್ರಶಾಂತ 99.1289068 ಪರ್ಸಂಟೈಲ್, ಪ್ರಜ್ವಲ್ ಚೌಧರಿ ನಂದೇಲಾ 99.0154909 ಪರ್ಸಂಟೈಲ್ ಪಡೆದಿದ್ದಾರೆ.

ಆಕಾಶ್ ಬಸವರಾಜ್ ಬುಲ್ಲಮ್ಮನ್ನವರ್ ರಾಷ್ಟ್ರ ಮಟ್ಟದಲ್ಲಿ 290ನೇ ರ್‍ಯಾಂಕ್‌, ಪ್ರಥಮ್ ಎಸ್.425ನೇ ರ್‍ಯಾಂಕ್‌, ಆರ್.ರಕ್ಷಿತಾ 865ನೇ ರ್‍ಯಾಂಕ್‌ ಗಳಿಸಿದ್ದಾರೆ.

98 ಪರ್ಸಂಟೈಲ್‌ಗಿಂತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 68, 95 ಪರ್ಸಂಟೈಲ್‌ಗಿಂತ 120, 234 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.

ADVERTISEMENT

ಭೌತವಿಜ್ಞಾನ ವಿಷಯದಲ್ಲಿ 2 ವಿದ್ಯಾರ್ಥಿಗಳು 100 ಪರ್ಸಂಟೈಲ್ ಪಡೆದರೆ, 24 ಮಂದಿ 99 ಪರ್ಸಂಟೈಲ್‌ ಪಡೆದಿದ್ದಾರೆ.

ರಸಾಯನವಿಜ್ಞಾನದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು 48 ಮಂದಿ ಪಡೆದಿದ್ದು, ಗಣಿತ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ ಅಂಕವನ್ನು 5 ಮಂದಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.