ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆ ಫಲಿತಾಂಶದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 53 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶೇ 95 ಗಿಂತ ಅಧಿಕ ಅಂಕ ಪಡೆದಿದ್ದಾರೆ.
ಎಚ್.ಆರ್. ರಜತ್ (99.271023 ಪರ್ಸಂಟೈಲ್), ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ಪ್ರಶಾಂತ್, ಭೌತ ವಿಜ್ಞಾನದಲ್ಲಿ 100 ಪರ್ಸಂಟೈಲ್ ಒಟ್ಟು 98.7993863 ಪರ್ಸಂಟೈಲ್ ಪಡೆದಿದ್ದಾರೆ.
ಭೌತವಿಜ್ಞಾನ, ರಸಾಯನವಿಜ್ಞಾನ ಹಾಗೂ ಗಣಿತ ಸೇರಿ ಮೂರು ವಿಷಯಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 19 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.
ದರ್ಶನ್‍ಕುಮಾರ್ ತಲ್ಲೊಳ್ಳಿ (98.6175507), ನಮಿತಾ ಎ.ಪಿ. (98.5761436), ಪ್ರೀತಮ್ ಎಂ. (98.1895688), ಪ್ರಜ್ವಲ್ ಡಿ.ಎಸ್. (98.1603894), ನವೀನ್ ಬಿ. ಸೋಲಂಕಿ (98.0893667), ಪುನೀತ್ ಎಸ್. (98.079865) ಮತ್ತು ರೋಹಿತ್ ಕುಮಾರ್ ಎಲ್. (98.0132287) 98 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಸದಾಕತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.